ಯಲ್ಲಾಪುರದ ಆರ್ತಿಬೈಲ್ ಘಟ್ಟದಲ್ಲಿ ಪೇಡಾ ಸಾಗಿಸುವ ವಾಹನ ಸೋಮವಾರ ಯುವಕನಿಗೆ ಗುದ್ದಿದ್ದು, ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಧಾರವಾಡದಿಂದ ಪೇಡಾ ಸಾಗಿಸುವ ವಾಹನ ಸ್ಥಳೀಯ ಯುವಕನಿಗೆ ಗುದ್ದಿದೆ. ಪರಿಣಾಮ ಸ್ಥಳೀಯ ಯುವಕನ ಕೈ-ಕಾಲು ಮುರಿದಿದ್ದು, ಆತ ಪ್ರಜ್ಞೆ ತಪ್ಪಿ ಹೆದ್ದಾರಿ ಮೇಲೆ ಬಿದ್ದುಕೊಂಡಿದ್ದ ವಿಡಿಯೋ ವೈರಲ್ ಆಗಿದೆ. ಗಾಯಗೊಂಡವರು ಇಡಗುಂದಿ – ಅರಬೈಲ್ ಭಾಗದವರು ಎಂಬ ಮಾಹಿತಿಯಿದೆ.
ಅಪಘಾತ ನಡೆಸಿದ ವಾಹನ ಚಾಲಕನನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳೀಯರೇ ಸೇರಿ ಯುವಕನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಪಘಾತ ನಡೆದಿರುವುದನ್ನು ಪೊಲೀಸರು ಖಚಿತ ಪಡಿಸಿದ್ದು, ಗಾಯಗೊಂಡವರ ಹೆಸರು, ವಿವರದ ಮಾಹಿತಿ ಬರಬೇಕಿದೆ. ತನಿಖೆ ಮುಂದುವರೆದಿದೆ.
ಅಪಘಾತದ ವಿಡಿಯೋ ಇಲ್ಲಿ ನೋಡಿ…
Discussion about this post