ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಭೂ ಕುಸಿತ ಉಂಟಾದ ಪರಿಣಾಮ ಹೆದ್ದಾರಿ ಸಂಚಾರ ಅಸ್ತವ್ಯಸ್ಥವಾಗಿದ್ದು ಸತತ 8 ದಿನದ ಪ್ರಯತ್ನದ ನಂತರ ಹೆದ್ದಾರಿ ಮೇಲಿನ ಶೇ 70ರಷ್ಟು ಮಣ್ಣನ್ನು ತೆರವು ಮಾಡಲಾಗಿದೆ. ಪೂರ್ತಿ ಮಣ್ಣು ಹೊರ ಸಾಗಿಸಲು ಇನ್ನೂ ಎರಡು ದಿನ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಗುರುವಾರ ಬೆಳಗ್ಗೆ ಗುಡ್ಡದ ತಪ್ಪಲಿನಲ್ಲಿ ಕಣ್ಮರೆಯಾಗಿದ್ದ ಸಣ್ಣಿ ಹನುಮಂತ ಗೌಡ (52) ಎಂಬಾತರ ಶವ ದೊರೆತಿದೆ. ಕಾಣೆಯಾದ ಇನ್ನೂ ಮೂವರ ಹುಡುಕಾಟ ಮುಂದುವರೆದಿದ್ದು, ಕೇರಳದ ಲಾರಿ ಈವರೆಗೂ ಸಿಕ್ಕಿಲ್ಲ. ಹೀಗಾಗಿ ನದಿಯಲ್ಲಿ ಲಾರಿ ಹುಡುಕಾಟ ಶುರುವಾಗಿದೆ.
ಗಂಗಾವಳಿ ನದಿಯಲ್ಲಿ ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ತಂಡ ದೇಹಗಳ ಹುಡಕಾಟ ನಡೆಸಿದೆ. ಮುಳುಗು ತಜ್ಞರು ಸಹ ಆಗಮಿಸಿದ್ದಾರೆ. ಮಿಲಟರಿ ಪಡೆ, ನೌಕಾಸೇನೆಯವರು ಈ ಕಾರ್ಯಾಚರಣೆಗೆ ಕೈ ಜೋಡಿಸಿದ್ದಾರೆ.
ಮಂಗಳವಾರ ನಡೆದ ಕಾರ್ಯಾಚರಣೆಯ ವಿಡಿಯೋ ಇಲ್ಲಿ ನೋಡಿ..
Discussion about this post