ದಾಂಡೇಲಿ ಇಎಸ್‌ಐ ಆಸ್ಪತ್ರೆ ಒಳಗೆ ಸೋಮವಾರ ಸಂಜೆ ಮೊಸಳೆಯ ಮರಿ ನುಗ್ಗಿದ್ದು, ಅಲ್ಲಿದ್ದ ರೋಗಿ ಹಾಗೂ ಸಿಬ್ಬಂದಿ ಕಕ್ಕಾಬಿಕ್ಕಿಯಾದರು.
ತಕ್ಷಣ ಆಸ್ಪತ್ರೆ ಭದ್ರತಾ ಸಿಬ್ಬಂದಿ ತುಕಾರಾಮ ಆ ಮೊಸಳೆ ಮರಿ ಹಿಡಿದು ನೆರೆದಿದ್ದವರ ಆತಂಕ ದೂರ ಮಾಡಿದರು. ನಂತರ ಇದನ್ನು ಕಾಳಿ ನದಿ ತಟಕ್ಕೆ ಬಿಡಲಾಯಿತು. ಈ ಹಿಂದೆ ಸಹ ಸಾಕಷ್ಟು ಬಾರಿ ಮೊಸಳೆಗಳು ದಾಂಡೇಲಿ ಜನ ವಸತಿ ಪ್ರದೇಶಗಳಿಗೆ ಬಂದಿವೆ.




Discussion about this post