6 Skip to content

ಅಂಬಿಗರ ಸಾಹಸಕ್ಕೆ ಮುಖ್ಯಮಂತ್ರಿ ಮೆಚ್ಚುಗೆ

ಶಿರೂರು ಗುಡ್ಡ ಕುಸಿತದ ಪರಿಣಾಮ ನದಿಯಲ್ಲಿ ಬಿದ್ದಿದ್ದ ಗ್ಯಾಸ್ ಟ್ಯಾಂಕರ್ ತೆರವಿಗೆ ನಿವೃತ್ತ ಅಗ್ನಿಶಾಮಕ ಅಧಿಕಾರಿ ಅನಂತ ಜಟ್ಟಿ ಅಂಬಿಗ ಸಾಕಷ್ಟು ಪ್ರಯತ್ನ ನಡೆಸಿದ್ದು, ಇದನ್ನು ತಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆದು ಮಾತನಾಡಿಸಿದರು.
ಸಡಗೇರಿಯಲ್ಲಿರುವ ಸಂಬoಧಿಕರ ಮನೆಗೆ ಬಂದಿದ್ದ ಅನಂತ ಅಂಬಿಗ ಟ್ಯಾಂಕರ್ ನದಿಯಲ್ಲಿರುವುದನ್ನು ನೋಡಿ ಅಗ್ನಿಶಾಮಕ ಸಿಬ್ಬಂದಿ ಜೊತೆ ಕಾರ್ಯಾಚರಣೆಗಿಳಿದಿದ್ದರು. ರಬ್ಬರ್ ಬೋಟ್ ಮೂಲಕ ಟ್ಯಾಂಕರ್ ಇದ್ದ ಸ್ಥಳಕ್ಕೆ ತೆರಳಿ ಅನಿಲ ಸೋರಿಕೆ ಪರಿಶೀಲಿಸಿದ್ದರು. ಸೋರಿಕೆ ತಡೆಗೆ ತಮ್ಮದೇ ಆದ ಪ್ರಯತ್ನ ನಡೆಸಿದ್ದರು.
ಟ್ಯಾಂಕರ್ ನದಿಯ ರಭಸಕ್ಕೆ ಮುಂದೆ ಚಲಿಸದಂತೆ ಹಗ್ಗದಿಂದ ಕಟ್ಟುವ ವಿಚಾರ ಮಾಡಿದ್ದರು. ಜೊತೆಗೆ ಊರಿನಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವಲ್ಲಿ ಊರಿನವರ ಮನವೊಲೈಸಿದರು. ಈ ವಿಷಯ ಅರಿತ ಸಿದ್ದರಾಮಯ್ಯ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Leave a comment

Leave a Reply

You cannot copy content of this page