ಅರಬ್ಬಿ ಸಮುದ್ರದಲ್ಲಿ ಸಂಚರಿಸುತ್ತಿದ್ದ ಹಡಗಿಗೆ ಹತ್ತಿದ ಬೆಂಕಿ ಇನ್ನೂ ಆರಿಲ್ಲ. ಹೀಗಾಗಿ ಬೆಂಕಿ ಆರಿಸುವ ಪ್ರಯತ್ನ ಮುಂದುವರೆದಿದೆ.
ಕಾರವಾರದಿOದ 50 ನಾಟಿಕಲ್ ಮೈಲಿ ದೂರದ ಸಮುದ್ರದದಲ್ಲಿ ಜುಲೈ 21ರಂದು ಕಂಟೇನರ್ ಸಾಗಿಸುತ್ತಿದ್ದ ಹಡಗಿಗೆ ಬಿದ್ದಿತ್ತು. `ಎಂ.ವಿ. ಮಾರ್ಸ್ಕ್ ಫ್ರಾಂಕ್ ಫರ್ಟ್ ಹೆಸರಿನ ಕಂಟೈನರ್’ ಎಂಬ ಕಂಪನಿಗೆ ಸೇರಿದ ಹಡಗು ಇದಾಗಿತ್ತು. ಈ ಹಡಗು ಮಲೇಷಿಯಾದಿಂದ ಹೊರಟಿತ್ತು. ಎಲ್ಲವೂ ಅಂದುಕೊOಡoತೆ ನಡೆದಿದ್ದರೆ, ಜು 21ಕ್ಕೆ ಶ್ರೀಲಂಕಾಗೆ ತಲುಪಬೇಕಿತ್ತು.
ಈ ಅಗ್ನಿ ಅವಘಡದ ಬಗ್ಗೆ ಮುಂಬೈನ ಮೆರಿಟೈಮ್ ರೆಸ್ಕ್ಯೂ ಕೋಆರ್ಡಿನೇಶನ್ ಸೆಂಟರ್‌ಗೆ ಮಾಹಿತಿ ರವಾನೆಯಾಗಿದ್ದು, ಅಲ್ಲಿಂದ ಬಂದ ಸಂದೇಶದ ಮೇರೆಗೆ ಭಾರತೀಯ ಕೋಸ್ಟ್ ಗಾರ್ಡ್ನ ಡಾರ್ನಿಯರ್ ಏರ್‌ಕ್ರಾಫ್ಟ್, ಸಚೇತ್, ಸುಜೀತ್, ಸಾಮ್ರಾಟ್ ಹೆಸರಿನ ಹಡಗುಗಳು ಹಾಗೂ ಒಂದು ಹೆಲಿಕಾಪ್ಟರ್ ಮೂಲಕ ಬೆಂಕಿ ನಂದಿಸುವ ಕೆಲಸ ನಡೆಯುತ್ತಿದೆ.
ಹಡಗಿಗೆ ಬಿದ್ದ ಬೆಂಕಿ ಆರಿಸುವ ವಿಡಿಯೋ ಇಲ್ಲಿ ನೋಡಿ..






Discussion about this post