ಮುರ್ಕವಾಡದಲ್ಲಿ ಮನೆಗಳ್ಳತನ
ಹಳಿಯಾಳ: ಮುರ್ಕವಾಡದ ಸಂಬಾಜಿ ಗುತ್ತಣ್ಣನವರ (64) ಅವರ ಮನೆಯಲ್ಲಿ ಕಳ್ಳತನವಾಗಿದೆ.
ಮನೆಯಲ್ಲಿ ಯಾರೂ ಇಲ್ಲದಿರುವಾಗ ಒಳಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿರಿಸಿದ್ದ ಹಣ ದೋಚಿ ಪರಾರಿಯಾಗಿದ್ದಾರೆ. ಜುಲೈ 19ರಂದು ಮನೆಯವರೆಲ್ಲರೂ ಹೊರಗಡೆ ಹೋಗಿದ್ದು, ಜುಲೈ 24ರಂದು ಮನೆಗೆ ಮರಳಿದಾಗ ಮನೆಯ ಬಾಗಿಲು ಒಡೆದಿರುವುದು ಕಾಣಿಸಿದೆ. ಒಳಗೆ ನೋಡಿದಾಗ 25 ಸಾವಿರ ರೂ ಹಣ ಕಳ್ಳತನವಾಗಿದೆ.
