ಮುಂಡಗೋಡ: ಇತರೆ ತಾಲೂಕುಗಳಿಗೆ ಹೋಲಿಸಿದರೆ ಮುಂಡಗೋಡದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮಳೆ ಸುರಿದಿದೆ. ಅದಾಗಿಯೂ ತಾಲೂಕಿನ 34 ಶಾಲೆಗಳಿಗೆ ಮಳೆಯಿಂದ ಹಾನಿಯಾಗಿದೆ.
ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಜಗಣಾಚಾರಿ ಮಾಹಿತಿ ನೀಡಿದ್ದು, `ಈ ಶಾಲೆಗಳಲ್ಲಿ ಗೋಡೆಗಳಿಗೆ ಬಿರುಕು ಮೂಡಿದೆ. ಅಲ್ಲಲ್ಲಿ ಸೋರುತ್ತಿದೆ’ ಎಂದು ತಿಳಿಸಿದರು. `ಕರವಳ್ಳಿ ಶಾಲೆಯಲ್ಲಿ ಗೋಡೆ ಕುಸಿದಿದೆ’ ಎಂದು ವಿವರಿಸಿದರು. `ಶಾಲೆಗಳ ಕೊಠಡಿ ಪರಿಶೀಲನೆ ನಡೆಸಿದ್ದು ಮಕ್ಕಳ ಹಾಗೂ ಶಿಕ್ಷಕರ ಸುರಕ್ಷತೆ ಕುರಿತು ಹೆಚ್ಚಿನ ಕಾಳಜಿವಹಿಸಲಾಗುತ್ತಿದೆ’ ಎಂದವರು ಹೇಳಿದ್ದಾರೆ.





Discussion about this post