ಯಲ್ಲಾಪುರ: ಮಂಚಿಕೇರಿ ಅರಣ್ಯ ವಲಯದಲ್ಲಿ ಗುರುವಾರ ಇನ್ನೊಂದು ಮರ ಮುರಿದುಬಿದ್ದಿದೆ.
ಜೋಗಬಟ್ಟರಕೇರಿಗೆ ತೆರಳುವ ಮಾರ್ಗದಲ್ಲಿ ದೊಡ್ಡ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಓಡಾಡಲು ಸ್ಥಳಾವಕಾಶವಿಲ್ಲ. ಈ ಭಾಗದಲ್ಲಿ ಒಟ್ಟು ಆರು ಮನೆಗಳಿವೆ. ಮರ ಬಿದ್ದಿದ್ದರಿಂದ ಎರಡು ಮನೆಯವರಿಗೆ ಸಮಸ್ಯೆಯಾಗಿದೆ. ಕಳೆದ ವರ್ಷ ಸಹ ಇಲ್ಲಿನ
ರಘುಪತಿ ಹೆಗಡೆ ಅವರ ಕೊಟ್ಟಿಗೆ ಮನೆ ಮೇಲೆ ಮರ ಬಿದ್ದು ಹಾನಿಯಾಗಿತ್ತು. ಮರ ಮುರಿದ ಬಗ್ಗೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಮರ ತೆರವು ಮಾಡಿಕೊಡುವಂತೆ ಮನವಿ ಮಾಡಿರುವುದಾಗಿ ಅವರು ಹೇಳಿದ್ದಾರೆ. ಬುಧವಾರ ಸಹ ಮಂಚಿಕೇರಿಯಲ್ಲಿ ಮರ ಬಿದ್ದು ಒಬ್ಬರು ಸಾವನಪ್ಪಿದ್ದರು. ಶಿರಸಿ-ಯಲ್ಲಾಪುರ ರಸ್ತೆ ನಡುವಿನ ತೂಕದಬೈಲ್ ಘಟ್ಟದಲ್ಲಿ ಸಹ ಬುಧವಾರ ಮರ ಬಿದ್ದಿತ್ತು.




Discussion about this post