`ಚುನಾವಣೆ ಅವಧಿಯಲ್ಲಿ ಸಹ ನಾನು ಈ ತರ ಕೆಲಸ ಮಾಡಿಲ್ಲ. ಆದರೆ, ಜನರ ಜೀವ ರಕ್ಷಣೆಗಾಗಿ ಅಪಾಯ ಇದ್ದರೂ ಗುಡ್ಡದ ಕೆಳಗೆ ನಿಂತು ಕೆಲಸ ಮಾಡಿದ್ದೇನೆ. ಈ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು’ ಎಂದು ಶಾಸಕ ಸತೀಶ್ ಸೈಲ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು `ನಾನು ಜನರ ಜೀವ ಉಳಿಸಲು ಕೆಲಸ ಮಾಡುತ್ತಿದ್ದೇನೆ. ಆದರೆ, ಕೆಲವರು ಶಾಸಕರು ಸ್ಥಳದಲ್ಲಿಲ್ಲ ಎಂದು ಹಬ್ಬಿಸುತ್ತಿದ್ದು, ನನ್ನ ಕೆಲಸವನ್ನು ಮುಖ್ಯಮಂತ್ರಿ ಸಹ ನೋಡಿದ್ದಾರೆ’ ಎಂದರು. `ಇಲ್ಲಿನ ಎಲ್ಲಾ ಕೆಲಸ ಮುಗಿಸಿಯೇ ಅಧಿವೇಶನಕ್ಕೆ ಬಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೆ ಸೂಚನೆ ನೀಡಿದ್ದಾರೆ. ಹೀಗಾಗಿ 10 ದಿನಗಳಿಂದ ಕ್ಷೇತ್ರದಲ್ಲಿಯೇ ಇದ್ದು, ವಾಸ್ತವ ಅರಿಯದವರು ನನ್ನ ವಿರುದ್ಧ ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ’ ಎಂದು ಹೇಳಿದರು. `ನಾನು ಕೆಲಸ ಮಾಡಿಲ್ಲ ಎಂದು ಸಾಬೀತು ಮಾಡಿದರೆ ರಾಜಿನಾಮೆ ನೀಡಲು ಸಿದ್ಧ’ ಎಂದರು.
Discussion about this post