ಡ್ರೋಣ್ ಹಾಗೂ ಹೆಲಿಕಾಪ್ಟರ್ ಬಳಸಿ ಶಿರೂರಿನಲ್ಲಿ ಗುರುವಾರ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ನಾಲ್ಕು ಲೋಹದ ವಸ್ತುಗಳು ಪತ್ತೆಯಾಗಿದೆ.
ಭೂಮಿ ಹಾಗೂ ನದಿ ಆಳದಲ್ಲಿ ಹುಡುಕಾಟ ನಡೆಸಿದ್ದು, ಆಗ ರಸ್ತೆಯಿಂದ 60ಮೀ ದೂರದ ನದಿ ಆಳದಲ್ಲಿ ಅರ್ಜುನ ಓಡಿಸುತ್ತಿದ್ದ ಲಾರಿ ಬಿದ್ದಿರುವುದು ಖಚಿತವಾಗಿದೆ. ಇದರೊಂದಿಗೆ ಒಂದು ಕ್ಯಾಬಿನ್, ಟವರ್ ಸಹ ಕಾಣಿಸಿದೆ. ನದಿಯಲ್ಲಿ ಕಾಣಿಸಿದ ಕ್ಯಾಬಿನ್ ಗ್ಯಾಸ್ ಟ್ಯಾಂಕರ್’ಗೆ ಸೇರಿದ್ದು ಎಂದು ಅಂದಾಜಿಸಲಾಗಿದೆ. ಇನ್ನೊಂದು ಉದ್ದವಾದ ರಿಲಿಂಗ್ ನೀರಿನಾಳದಲ್ಲಿ ಕಾಣಿಸಿದ್ದು, ಅದು ಯಾವುದರ ಲೋಹ ಎಂದು ಗೊತ್ತಾಗಿಲ್ಲ. ಇನ್ನೊಂದು ಥರ್ಮರ್ ಸ್ಕಾನರ್ ನೀರಿನ ಆಳದಲ್ಲಿರುವ ಬಗ್ಗೆ ಶಂಕೆಯಿದ್ದು, ಅದು ಖಚಿತವಾಗಿಲ್ಲ. ಭಾರತೀಯ ನೌಕಾಪಡೆ ಹಾಗೂ ಮಿಲಟರಿ ಪಡೆಯವರು ಗುರುವಾರ ಇಡೀ ದಿನ ನದಿ ಹಾಗೂ ಭೂಮಿಯೊಳಗೆ ಲೋಹಗಳ ಹುಡುಕಾಟ ನಡೆಸಿದ್ದರು.
ಗುರುವಾರ ನಡೆದ ಕಾರ್ಯಾಚರಣೆಯ ಬಗ್ಗೆ ನಿವೃತ್ತ ಮೇಜರ್ ಇಂದ್ರಬಾಲನ್ ಹೇಳಿದ್ದೇನು? ಇಲ್ಲಿ ನೋಡಿ..




Discussion about this post