ಅರ್ಜುನ ಚಲಾಯಿಸುತ್ತಿದ್ದ ಲಾರಿಯಲ್ಲಿ 17 ಸಾವಿರ ಲೀಟರ್ ಆಕ್ಸಿಜನ್ ಇದ್ದು, ಎಂಥ ಕಷ್ಟ ಪರಿಸ್ಥಿತಿಯಲ್ಲಿಯೂ ಅದನ್ನು ಬಳಸಿಕೊಂಡು ಮನುಷ್ಯ 6 ದಿನ ಬದುಕಬಹುದು. ಆದರೆ, ಈಗಾಗಲೇ ಲಾರಿ ನಾಪತ್ತೆಯಾಗಿ 10 ದಿನ ಕಳೆದಿರುವುದರಿಂದ ಅರ್ಜುನ ಬದುಕಿರುವ ಸಾಧ್ಯತೆಗಳಿಲ್ಲ.
ಇದರೊಂದಿಗೆ ಲಾರಿ ನೀರಿನ ಒಳಗೆ ಅತ್ಯಂತ ಆಳದಲ್ಲಿ ಬಿದ್ದಿದ್ದು, ಗರಿಷ್ಟ 3.5 ಮೀವರೆಗೆ ಕಾರ್ಯಾಚರಣೆ ನಡೆಸಲು ಸಾಧ್ಯ. ಇದಕ್ಕಿಂತ ಕೆಳಭಾಗದಲ್ಲಿ ಲಾರಿ ಸಿಲುಕಿರುವುದರಿಂದ ಅರ್ಜುನ ಜೀವಂತವಾಗಿರುವ ಲಕ್ಷಣಗಳಿಲ್ಲ. ಅರ್ಜುನ ಬದುಕಿರಬಹುದು ಎಂದ ಆಸೆಯಿಂದ ಆತನಿಗಾಗಿ ವಿಶೇಷ ಮುತುವರ್ಜಿವಹಿಸಿ ಕಾರ್ಯಾಚರಣೆ ನಡೆಸಲಾಗಿತ್ತು.
ಕೇರಳದ ಅರ್ಜುನನಿಗಾಗಿ ಆ ಭಾಗದ ಜನ ಸಹ ಪ್ರಾರ್ಥಿಸುತ್ತಿದ್ದು, ಅಲ್ಲಿನ ಜನಪ್ರತಿನಿಧಿಗಳು ಇಲ್ಲಿ ಬೀಡು ಬಿಟ್ಟಿದ್ದರು. ಕೇರಳದ 30ಕ್ಕೂ ಅಧಿಕ ಮಾದ್ಯಮದವರು ಶಿರೂರಿಗೆ ಆಗಮಿಸಿ ಅರ್ಜುನನ ಬಗ್ಗೆ ವರದಿ ಪ್ರಸಾರ ಮಾಡಿ ಸರ್ಕಾರದ ಮೇಲೆ ಒತ್ತಡ ತಂದಿದ್ದರು. ಈಗಲೂ ಅರ್ಜುನನ ಕುಟುಂಬದವರು ಆತನಿಗಾಗಿ ಪ್ರಾರ್ಥಿಸುತ್ತಿದ್ದಾರೆ.




Discussion about this post