ಅರ್ಜುನ ಓಡಿಸುತ್ತಿದ್ದ ಲಾರಿ ಗುಡ್ಡದ ಕೆಳಗಿನ ಮಣ್ಣಿನಲ್ಲಿರುವ ಬಗ್ಗೆ ಕೇರಳ ತಪ್ಪು ಮಹಿತಿ ನೀಡಿದ್ದು, ಇದೇ ಕಾರಣದಿಂದ ಲಾರಿ ಹುಡುಕಾಟಕ್ಕೆ ತಡವಾಗಿದೆ.
ಹೆದ್ದಾರಿ ಮೇಲೆ ಲಾರಿ ನಿಂತಿರುವ ಬಗ್ಗೆ ಜಿಪಿಎಸ್ ತೋರಿಸುತ್ತಿರುವುದಾಗಿ ಕೇರಳ ಮಾಹಿತಿ ನೀಡಿತ್ತು. 6 ದಿನಗಳ ಕಾಲ ಲಾರಿ ಒಳಗಿದ್ದವರು ಬದುಕಬಹುದು ಎಂದು ತಿಳಿಸಿದ ಕಾರಣ ಗುಡ್ಡದ ಮಣ್ಣನ್ನು ತೆರವು ಮಾಡಲು ಮೊದಲ ಆದ್ಯತೆ ನೀಡಲಾಗಿತ್ತು. ಆದರೆ, ಲಾರಿ ನೀರಿನ ಆಳದಲ್ಲಿ ಅವಿತುಕೊಂಡಿದ್ದು, ಇಂದಿಗೆ 10 ದಿನ ಕಳೆದಿದೆ.
ಗುಡ್ಡದ ಮಣ್ಣು ಬಹುತೇಕ ತೆರವು ಆದ ನಂತರ ಮಂಜೇಶ್ವರದ ಶಾಸಕ ಅಶ್ರಫ್ ಸಹ `ಲಾರಿ ಹೆದ್ದಾರಿ ಮೇಲೆ ಇಲ್ಲ’ ಎಂದು ಹೇಳಿದ್ದರು. ಆ ವೇಳೆ ಅವರು ಲಾರಿ ನದಿಯಲ್ಲಿ ಮುಳುಗಿರುವ ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನಲೆ ನದಿ ಆಳದಲ್ಲಿ ಲಾರಿ ಹುಡುಕುವ ಕಾರ್ಯಾಚರಣೆ ನಡೆಸಿದ್ದು, ಬುಧವಾರ ಲಾರಿ ಪತ್ತೆಯಾಗಿತ್ತು. ಈ ನಡುವೆ ಅರ್ಜುನ ಬಳಸುತ್ತಿದ್ದ ಮೊಬೈಲ್ ಒಮ್ಮೆ ರಿಂಗಾದ ಬಗ್ಗೆ ಕೇರಳ ಸರ್ಕಾರ ದೃಢೀಕರಿಸಿದ್ದು, ಅದರ ಸತ್ಯಾಸತ್ಯತೆ ಬಗ್ಗೆ ಖಚಿತವಾಗಿಲ್ಲ.
ಶಿರೂರು: ತಪ್ಪು ಮಾಹಿತಿ ನೀಡಿದ ಕೇರಳ

Leave a comment