6 Skip to content

ದಂಪತಿ ಕೈಯಲ್ಲಿ ರಾಜ್ಯ ಆಡಳಿತ!

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ರಜನೀಶ್ ಗೋಯಲ್ ಅವರ ಸೇವಾ ಅವಧಿ ಜುಲೈ 31ರಂದು ಮುಕ್ತಾಯವಾಗಲಿದ್ದು, ಅವರ ಪತ್ನಿ ಡಾ ಶಾಲಿನಿ ರಜನೀಶ್ ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಲಿದ್ದಾರೆ. ಅದೇ ದಿನ ಮಧ್ಯಾಹ್ನ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.
ಈ ಹಿಂದೆ ಸಹ ಬಿ ಕೆ ಭಟ್ಟಾಚಾರ್ಯ ಅವರು ನಿವೃತ್ತರಾದಾಗ ಸರ್ಕಾರ ಅವರ ಪತ್ನಿ ತೆರೇಸಾ ಭಟ್ಟಾಚಾರ್ಯ ಅವರಿಗೆ ಆ ಹುದ್ದೆ ನೀಡಿತ್ತು. ಬಿ ಕೆ ದಾಸ್ ಅವರು ನಿವೃತ್ತರಾದಾಗಲೂ ಡಾ ಮಾಲತಿ ದಾಸ್ ಅವರನ್ನು ಮುಖ್ಯಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿತ್ತು. ಇದೀಗ ಡಾ ರಜನೀಶ್ ಗೋಯಲ್ ಅವಧಿ ನಂತರ ಡಾ ಶಾಲಿನಿ ರಜನೀಶ್ ಅವರಿಗೆ ಅಧಿಕಾರ ಕೊಡಲಾಗಿದೆ. ಪ್ರತಿ ಬಾರಿಯೂ ಅವರವರ ಅನುಭವ ಹಾಗೂ ಸೇವಾ ಮಾನದಂಡವನ್ನು ಪರಿಗಣಿಸಿ ಈ ಹುದ್ದೆ ನೀಡಲಾಗಿದೆ.

Leave a comment

Leave a Reply

You cannot copy content of this page