`ಫೋಟೋಗ್ರಾಫಿ ಹಾಗೂ ವಿಡಿಯೋಗ್ರಾಫಿ’ ವೃತ್ತಿ ನಡೆಸುವ ಉದ್ದೇಶ ಹೊಂದಿದವರಿಗೆ ರುಡ್‌ಸೆಟ್ ಸಂಸ್ಥೆ 30 ದಿನದ ತರಬೇತಿ ನಡೆಸುತ್ತಿದೆ. ಅಗಷ್ಟ 1ರಿಂದ ಈ ತರಬೇತಿ ಶುರುವಾಗಲಿದ್ದು, ಊಟ-ವಸತಿ ಎರಡೂ ಉಚಿತ!
ಕೆನರಾ ಬ್ಯಾಂಕ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್’ನ ಸಹಯೋಗದಲ್ಲಿ ಈ ಶಿಬಿರ ನಡೆಯಲಿದೆ. 18ರಿಂದ 45 ವರ್ಷದ ಒಳಗಿನ ಕನ್ನಡ ಓದಲು ಹಾಗೂ ಬರೆಯಲು ಬರುವವರು ಇದಕ್ಕೆ ಅರ್ಜಿ ಸಲ್ಲಿಸಬಹುದು. ಬಿಪಿಎಲ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಜೊತೆ ಆಧಾರ್ ಕಾರ್ಡ ಹೊಂದಿರುವುದು ಕಡ್ಡಾಯ. ಡಿಎಸ್‌ಎಲ್‌ಆರ್ ಕ್ಯಾಮರಾ ಹೊಂದಿದ ಗ್ರಾಮೀಣ ಭಾಗದವರಾದರೆ ಇನ್ನೂ ಉತ್ತಮ. ತರಬೇತಿ ಮುಗಿದ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣ ಪತ್ರ ಸಿಗಲಿದೆ.
ಇನ್ನಷ್ಟು ಮಾಹಿತಿಗೆ
ರುಡ್‌ಸೆಟ್ ಸಂಸ್ಥೆ
ಅರಿಶಿನಕುoಟೆ, ನೆಲಮಂಗಲ ತಾಲೂಕು
ಬೆಂಗಳೂರು ಗ್ರಾಮಾಂತರ ಜಿಲ್ಲೆ
ಮೋ: 9740982585, 9380162042ಗೆ ಫೋನ್ ಮಾಡಿ.
ಕ್ಯಾಮರಾ ಹಿಡಿದು ದುಡ್ಡುಗಳಿಸುವುದು ಹೇಗೆ? ಇಲ್ಲಿ ಹೇಳಿಕೊಡ್ತಾರೆ ನೋಡಿ!

Leave a comment