6 Skip to content

ಶಿರೂರು ದುರಂತ: ಸಾವಿನಲ್ಲಿಯೂ ಒಂದಾದ ಅಣ್ಣ-ತಂಗಿ

ಅವಂತಿಕಾಳ ಪಾಲಿಗೆ ಅಣ್ಣನೇ ಸರ್ವಸ್ವ. ನಿತ್ಯ ಊಟ ಮಾಡಿಸುವುದರಿಂದ ಹಿಡಿದು ರಾತ್ರಿ ತಟ್ಟಿ ಮಲಗಿಸಲು ಸಹ ಆಕೆಗೆ ಅಣ್ಣ ರೋಷನ್ ಬೇಕಿತ್ತು. ಹೀಗಾಗಿ ಅಣ್ಣ ಕಿಲಾಡಿ ಮಾಡಿದರೂ ಆತನಿಗೆ ಯಾರೂ ಗದರಿಸುವಂತಿರಲಿಲ್ಲ. ಅಣ್ಣನಿಗೆ ಯಾರಾದರೂ ಬೈದರೆ ಅವಂತಿಕಾ ಅಳುತ್ತಿದ್ದಳು. ರೋಷನ್’ಗೆ ಸಹ ತಂಗಿ ಕಂಡರೆ ಅಷ್ಟೇ ಅಕ್ಕರೆ. ಒಬ್ಬರನ್ನು ಒಬ್ಬರು ಎಂದಿಗೂ ಬಿಟ್ಟಿರುತ್ತಿರಲಿಲ್ಲ.
ಇಷ್ಟು ಅನ್ಯೋನ್ಯವಾಗಿದ್ದ ರೋಷನ್ (11 ವರ್ಷ) ಹಾಗೂ ಅವಂತಿಕಾ (6 ವರ್ಷ) ಎಂಬ ಅಣ್ಣ ತಂಗಿ ಲಕ್ಷಣ ನಾಯ್ಕ ಹಾಗೂ ಶಾಂತಿ ನಾಯ್ಕರ ಸಾರ್ಥಕ ಬದುಕಿಗೆ ಸಾಕ್ಷಿಯಾಗಿದ್ದರು. ಇನ್ನೂ ಬಾಳಿ ಬದುಕಬೇಕಿದ್ದ ಆ ಚಿಣ್ಣರು ಇಡೀ ಕುಟುಂಬದ ಜೊತೆ ಮಣ್ಣಿನಲ್ಲಿ ಮಣ್ಣಾಗಿದ್ದಾರೆ. ತಮ್ಮ ಬದುಕಿಗಾಗಿ ಕಟ್ಟಿಕೊಂಡಿದ್ದ ಚಹಾ ಅಂಗಡಿಯೇ ಅವರ ಪಾಲಿನ ಸಮಾಧಿಯಾಗಿದೆ.
ರೋಷನ್ ಹಾಗೂ ಅವಂತಿಕಾ ಕುಣಿದು ಕುಪ್ಪಳಿಸಿದ ವಿಡಿಯೋ ಇಲ್ಲಿ ನೋಡಿ..

 

Leave a comment

Leave a Reply

You cannot copy content of this page