ಜೊಯಿಡಾ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ರಾಮನಗರದ ಮನೆ ಮೇಲೆ ಶನಿವಾರ ತಂತಿ ಬಿದ್ದಿದ್ದು, ತಕ್ಷಣ ಆಗಮಿಸಿ ತ್ವರಿತ ಕಾರ್ಯಾಚರಣೆ ನಡೆಸಿದ ಹೆಸ್ಕಾಂ ಸಿಬ್ಬಂದಿ ಅಪಾಯವನ್ನು ದೂರ ಮಾಡಿದರು.
ರಭಸ ಗಾಳಿ-ಮಳೆಗೆ ಇಲ್ಲಿ ಹಲವು ಮರಗಳು ಉರುಳಿ ಬಿದ್ದಿದೆ. ವಿದ್ಯುತ್ ತಂತಿ ಹಾಗೂ ಕಂಬಗಳು ಮುರಿದಿವೆ. ಈ ಬಗ್ಗೆ ದೂರು ಸ್ವೀಕರಿಸಿ ಹೆಸ್ಕಾಂ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. `ವಿದ್ಯುತ್ ಉತ್ಪಾದನೆಗಾಗಿ ಊರುಬಿಟ್ಟುಕೊಟ್ಟವರಿಗೆ ರಾಮನಗರದಲ್ಲಿ ಪುನರ್ವಸತಿ ಕಲ್ಪಿಸಲಾಗಿದ್ದು, ಅಗತ್ಯ ಸೌಕರ್ಯ ಒದಗಿಸಿಲ್ಲ. ಈ ಊರಿನಲ್ಲಿ ಪವರ್ ಸ್ಟೇಶನ್ ನಿರ್ಮಿಸಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮನೆ ಮೇಲೆ ಬಿದ್ದ ವಿದ್ಯುತ್ ಕಂಬ ತೆರವು ಕಾರ್ಯಾಚರಣೆಯ ವಿಡಿಯೋ ಇಲ್ಲಿ ನೋಡಿ..





Discussion about this post