ದೆಹಲಿ ಅಧಿವೇಶನದಲ್ಲಿದ್ದ ಸಂಸದ ಕಾಗೇರಿ ಅಲ್ಲಿಂದ ನೇರವಾಗಿ ಶಿರೂರಿಗೆ ಆಗಮಿಸಿದ್ದು, ಇಲ್ಲಿನ ರಕ್ಷಣಾ ಚಟುವಟಿಕೆಗಳ ಮೇಲೆ ಕಣ್ಣಾಡಿಸಿದರು.
ಉಳುವರೆಗೆ ತೆರಳಿ ಜನರ ಅಹವಾಲು ಆಲಿಸಿದ ಅವರು ಅಲ್ಲಿನ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದರು. ಮುಂದೆ ಕೈಗೊಳ್ಳಬೇಕಾದ ಪರಿಹಾರ ಕಾರ್ಯ ಹಾಗೂ ಕಾರ್ಯಾಚರಣೆಯ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿದರು. ಗುಡ್ಡ ಕುಸಿತದಿಂದ ನಾಪತ್ತೆಯಾದ ಜಗನ್ನಾಥ ಅವರ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಈ ವೇಳೆ ಮಾದ್ಯಮದವರ ಜೊತೆ ಮಾತನಾಡಿದ ಅವರು `ವಿಷಯದ ಗಂಭೀರದ ಹಿನ್ನಲೆ ಎನ್‌ಡಿಆರ್‌ಎಫ್ ಹಾಗೂ ಸೈನ್ಯ ಸಹ ಇಲ್ಲಿ ಬಂದು ಕೆಲಸ ಮಾಡುತ್ತಿದೆ. ಸೀಬರ್ಡ ಹಾಗೂ ಕೋಸ್ಟಗಾರ್ಡ ನೆರವು ನೀಡಿದೆ. ಮೂವರ ಶೋಧ ಕಾರ್ಯ ನಡೆಯುತ್ತಿದೆ. ತಾಂತ್ರಿಕ ಪರಿಣಿತಿ ಹೊಂದಿದವರು ಇಲ್ಲಿ ಕೆಲಸ ಮಾಡುತ್ತಿದ್ದು, ತಜ್ಞರು ಟಗ್ ಬೋಟ್ ನಿರೀಕ್ಷೆಯಲ್ಲಿದ್ದು, ಇನ್ನಷ್ಟು ಉಪಕರಣಗಳು ಬರುತ್ತಿದೆ. ಅತ್ಯಂತ ಕ್ಲಿಷ್ಕರವಾದ ಸಮಸ್ಯೆ ಇದಾಗಿದ್ದು ಕೇಂದ್ರದ ಜೊತೆ ರಾಜ್ಯ ಸರ್ಕಾರವೂ ತಕ್ಷಣ ಸ್ಪಂದಿಸಿದೆ’ ಎಂದು ಹೇಳಿದರು. ಮಾಜಿ ಶಾಸಕಿ ರೂಪಾಲಿ ನಾಯ್ಕ ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್ ಎಸ್ ಹೆಗಡೆ, ಪ್ರಮುಖರಾದ ನಾಗರಾಜ ನಾಯಕ ಅವರ ಜೊತೆಯಿದ್ದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉಳುವರೆಗೆ ಭೇಟಿ ನೀಡಿದ ವಿಡಿಯೋ ಇಲ್ಲಿ ನೋಡಿ..

Leave a comment