6 Skip to content

ಮಾಗೋಡು ಜಲಪಾತ ವೀಕ್ಷಣೆಗೆ ಹೋಗುವವರಿಗೆ ನಿರಾಸೆ!

ಯಲ್ಲಾಪುರ: ಇಲ್ಲಿನ ಮಾಗೋಡು ಜಲಪಾತಕ್ಕೆ ತೆರಳುವ ರಸ್ತೆ ಕುಸಿತವಾಗಿದ್ದು, ಜಲಪಾತಕ್ಕೆ ತೆರಳುವವರಿಗೆ ಅಲ್ಲಿನ ಜನ ತಡೆ ಒಡ್ಡಿದ್ದಾರೆ.
ಡಾಂಬರ್ ರಸ್ತೆ ಕುಸಿತವಾಗಿದ್ದು, ಆ ಭಾಗದಲ್ಲಿ ಕಂದಕ ಉಂಟಾಗಿದೆ. ಅಂದಾಜು 15 ಅಡಿ ಆಳ ಕುಸಿದಿದ್ದು, ಮರಗಳು ನೆಲಕ್ಕೆ ಅಪ್ಪಳಿಸಿದೆ. ಕಂದಕದ ಆಳದಲ್ಲಿ ರಭಸ ನೀರು ಹರಿಯತ್ತಿದೆ. ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ಈ ಹಿನ್ನಲೆ ಅಲ್ಲಿನ ಓಡಾಟಕ್ಕೆ ಜನ ಅವಕಾಶ ಕೊಡುತ್ತಿಲ್ಲ.
ಜಲಪಾತಕ್ಕೆ ತೆರಳುವ ಪ್ರವಾಸಿಗರು ಮೊದಲು ಭೂ ಕುಸಿತವನ್ನು ಗಮನಿಸಿದ್ದಾರೆ. ನಂತರ ಸ್ಥಳೀಯರು ಆಗಮಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮೊಟ್ಟೆಗದ್ದೆ ಶಾಲೆ ಬಳಿ ಪ್ರವಾಸಿಗರ ವಾಹನಗಳು ನಿಂತಿದ್ದು, ಮುಂದೆ ಸಂಚರಿಸಲಾಗದೇ ಮರಳುತ್ತಿದ್ದಾರೆ. ಪ್ರಸ್ತುತ ಧಾರಾಕಾರ ಮಳೆ ಮುಂದುವರೆದಿದ್ದು, ಪ್ರವಾಸಿಗರು ಜಲಪಾತ ವೀಕ್ಷಣೆಗೆ ಹೋಗದಿರುವುದೇ ಒಳಿತು.
ಭೂ ಕುಸಿತದ ನೇರ ದೃಶ್ಯಾವಳಿಗಳನ್ನು ಸ್ಥಳೀಯ ಶಿಕ್ಷಕ ಎಂ ರಾಜಶೇಖರ್ ಚಿತ್ರಿಕರಿಸಿ ಜನರಲ್ಲಿ ಅರಿವು ಮೂಡಿಸುತ್ತಿದ್ದು, ವಿಡಿಯೋ ಇಲ್ಲಿ ನೋಡಿ..

Leave a comment

Leave a Reply

You cannot copy content of this page