ಜೊಯಿಡಾ: ಬಸ್ಸಿನಲ್ಲಿ ಪಿಸ್ತುಲ್ ಹಿಡಿದು ಓಡಾಡುತ್ತಿದ್ದ ಐವರಲ್ಲಿ ಇಬ್ಬರನ್ನು ರಾಮನಗರದ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ಗೋವರ್ದನ ಸಿಂಗ್ ರಾಜಪುರೊಹಿತ ಮತ್ತು ಶಾಮಲಾಲ್ ಮೇಘವಾಲ್ ಬಂಧಿತರು. ಆನಮೋಡು – ಗೋವಾ ಬಸ್ಸಿನಲ್ಲಿ ಈ ಡಕಾಯಿತರು ಸಂಚರಿಸುತ್ತಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರಿಗೆ ಈ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಜೊಯಿಡಾ ಸಿಪಿಐ ಚಂದ್ರಶೇಖರ ಹರಿಹರ ಮತ್ತು ರಾಮನಗರ ಪಿಎಸೈ ಬಸವರಾಜ ಮಬನೂರ ಇಬ್ಬರನ್ನು ಅವರು ಅಲ್ಲಿ ಕಳುಹಿಸಿಕೊಟ್ಟರು. ಆಗ ಇಬ್ಬರು ಡಕಾಯಿತರು ಪಿಸ್ತೂಲುಸಹಿತ ಸಿಕ್ಕಿಬಿದ್ದರು.
ಉಳಿದ ಮೂವರು ತಪ್ಪಿಸಿಕೊಂಡಿದ್ದು, ಅವರ ಶೋಧ ಮುಂದುವರೆದಿದೆ. ಪಿಸ್ತುಲ್ ಜೊತೆ ಎರಡು ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋವಾದಲ್ಲಿರುವ ಜ್ಯುವೆಲರಿ ಮಳಿಗೆ ಮೇಲೆ ದಾಳಿ ನಡೆಸಲು ಅವರು ಪ್ರಯತ್ನಿಸಿದ್ದು, ಅದು ವಿಫಲವಾಗಿತ್ತು. ಅಲ್ಲಿಂದ ಮರಳುವಾಗ ಡಾಕಾಯಿತರಿಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತರಿಬ್ಬರೂ ಒಂದೇ ಬಣ್ಣದ ಬಟ್ಟೆ ಧರಿಸಿದ್ದು ವಿಶೇಷ.




Discussion about this post