ಕರಾವಳಿ ಭಾಗದಲ್ಲಿ ಈ ಹಿಂದೆ ವಿವಿಧ ರೀತಿಯ ಮೀನುಗಾರಿಕೆ ನಡೆಸುತ್ತಿದ್ದು ಅದರಲ್ಲಿ ರಂಪಣಿ ಮೀನುಗಾರಿಕೆ ಸಹ ಒಂದು. ರಂಪಣಿ ಮೀನುಗಾರಿಕೆ ಅತ್ಯಂತ ಪುರಾತನ ಪದ್ಧತಿಯಾಗಿದ್ದು, ಇದೀಗ ಕಣ್ಮರೆಯಾಗಿದೆ. ಅಗಸ್ಟ್ 1ರಿಂದ ಯಾಂತ್ರಿಕೃತ ಮೀನುಗಾರಿಕೆ ನಡೆಯುಲಿದ್ದು, ಅದರ ಹಿಂದಿನ ದಿನ ಕಾರವಾರ ತೀರದಲ್ಲಿ ರಂಪಣಿ ಮೀನುಗಾರಿಕೆಯ ದೃಶ್ಯ ಕಂಡು ಬಂದಿತು.
ಕರಾವಳಿ ತೀರಗಳಲ್ಲಿ ರಾಜವೈಭವ ಮೆರೆದ ರಂಪಣಿ ಮೀನುಗಾರಿಕೆ ಇದೀಗ ನೆನಪು ಮಾತ್ರ ಎನ್ನುತ್ತಿದ್ದವರು ರಂಪಣಿ ನೋಡಿ ಖುಷಿಪಟ್ಟರು. ಹಳೆಯ ಮೀನುಗಾರರು ಆಗಮಿಸಿ, ರಂಪಣಿ ಮೀನು ಹಿಡಿಯುವುದನ್ನು ಯುವಕರಿಗೆ ಕಲಿಸಿದರು. ಹಿಂದೆ ರಂಪಣಿ ಮೀನುಗಾರಿಕೆಯಲ್ಲಿ ದೈತ್ಯಾಕಾರದ ದೋಣಿಗಳ ಜೊತೆ 3-4 ಕಿಮೀ ಉದ್ದದ ಬಲೆ ಬಳಸಲಾಗುತ್ತಿತ್ತು. ಒಂದೊoದು ಬಲೆಗೂ 200ರಿಂದ 400 ಮೀನುಗಾರರು ಬೇಕಾಗುತಿತ್ತು. ಆದರೆ, ಇದೀಗ ರಂಪಣಿ ಮಾದರಿಯಲ್ಲಿ ಮೀನುಗಾರಿಕೆ ನಡೆಸಿದ್ದು, ಎರಡು ಬುಟ್ಟಿ ಮಾತ್ರ ಮೀನು ದೊರೆಯಿತು.
ರಂಪಣಿ ಮೀನುಗಾರಿಕೆಯ ನೋಟ ಇಲ್ಲಿದೆ ನೋಡಿ…




Discussion about this post