ಸಿದ್ದಿ ಜನಾಂಗದವರಿಗೆ ಯಕ್ಷಗಾನ ಪ್ರೀತಿ ಮೂಡಿಸಿ ಅವರ ತಂಡದೊoದಿಗೆ ತಿರುಗಾಟ ನಡೆಸಿದ ಹಿರಿಮೆಗೆ ಪಾತ್ರರಾದವರು ಶಿರಸಿ ತಾಲೂಕಿನ ಶಿರಗುಣಿಯ ಲಕ್ಷ್ಮೀನಾರಾಯಣ ಹೆಗಡೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಯಕ್ಷಗಾನ ನೀಡಿದ ಅವರು ದೆಹಲಿ, ಹರಿಯಾಣ, ಮುಂಬೈ, ಚಂಡಿಗಢ ಹಾಗೂ ಕೇರಳದಲ್ಲಿ ಸಹ ಗೆಜ್ಜೆಕಟ್ಟಿ ಕುಣಿದಿದ್ದಾರೆ. ಅವರ ತಂದೆ ಸುಬ್ರಾಯ ಹೆಗಡೆ ಸಹ ಯಕ್ಷಗಾನ ಭಾಗವತರಾಗಿದ್ದರು. ಅವರಿಂದ ಬಳುವಳಿಯಾಗಿ ಬಂದ ಕಲೆಯನ್ನು ಲಕ್ಷ್ಮೀನಾರಾಯಣ ಹೆಗಡೆ ಅವರು ಮುಂದುವರೆಸಿಕೊoಡು ಬಂದಿದ್ದಾರೆ. ತಮ್ಮ 5ನೇ ತರಗತಿಯಲ್ಲಿರುವಾಗ ವೇಷ ಕಟ್ಟಿದ ಅವರು ಈಗಲೂ ವಿವಿಧ ಆಟಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ.
9 ವರ್ಷಗಳ ಕಾಲ ಮೇಳದ ತಿರುಗಾಟ ನಡೆಸಿದ ಅವರು ಊರಿಗೆ ಬಂದು ಸುಮ್ಮನೆ ಕೂರಲಿಲ್ಲ. ಇಲ್ಲಿನ ಸಿದ್ದಿ ಜನಾಂಗದವರಲ್ಲಿನ ಕಲೆ ಗುರುತಿಸಿ ಅವರಿಗೂ ಯಕ್ಷಗಾನದ ಪ್ರೀತಿ ಹುಟ್ಟಿಸಿದರು. ಆಸಕ್ತರಿಗೆ ಯಕ್ಷನೃತ್ಯ ಕಲಿಸಿ ವೇದಿಕೆಗಳಲ್ಲಿ ಅವಕಾಶ ಕೊಡಿಸಿದರು. ಇದರ ಜೊತೆ ತಾವು ಸಹ ಚಿಟ್ಟಾಣಿಯವರ ತಂಡ ಸೇರಿ ಐದು ವರ್ಷಗಳ ಕಾಲ ಚಿಟ್ಟಾಣಿಯವರ ನಾಯಕನ ಪಾತ್ರಕ್ಕೆ ಪ್ರತಿನಾಯಕನ ಪಾತ್ರ ಮಾಡಿದರು.
ಮಹಿಷ, ಭೀಮ, ಧರ್ಮರಾಯ, ರಾವಣ, ರಕ್ತಜಂಘ, ಜಮದಗ್ನಿ ಸೇರಿದಂತೆ ಖಳನಾಯಕ ಹಾಗೂ ಪೋಷಕ ಪಾತ್ರಗಳಲ್ಲಿ ಲಕ್ಷ್ಮೀನಾರಾಯಣ ಅವರ ಹೆಸರು ದೊಡ್ಡದು.
ಯಕ್ಷಗಾನ ವೇಷಭೂಷಣ ತಯಾರಿಕೆಯಲ್ಲಿಯೂ ಲಕ್ಷ್ಮೀನಾರಾಯಣ ಹೆಗಡೆಯವರದ್ದು ಎತ್ತಿದ ಕೈ.
ಕರ್ನಾಟಕ ಕಲಾ ಸನ್ನಿಧಿಯವರು ಹಂಚಿಕೊoಡ ಲಕ್ಷ್ಮೀನಾರಾಯಣ ಹೆಗಡೆಯವರ ಮಹಿಷಾಸುರನ ಪಾತ್ರದ ವಿಡಿಯೊ ಇಲ್ಲಿ ನೋಡಿ..
Discussion about this post