6 Skip to content

ಹೆದ್ದಾರಿ ಸಂಚಾರಕ್ಕೆ ದೊರೆತ ಅನುಮತಿ: ಷರತ್ತು ಅನ್ವಯ!

ಶಿರೂರು ಗುಡ್ಡ ಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿ ಮೇಲೆ ಬಿದ್ದಿದ್ದ ಮಣ್ಣಿನ ಗುಡ್ಡೆಯನ್ನು ಇದೀಗ ಸಂಪೂರ್ಣವಾಗಿ ತೆಗೆಯಲಾಗಿದ್ದು, ಅಸ್ತವ್ಯಸ್ಥಗೊಂಡಿದ್ದ ಹೆದ್ದಾರಿ ಸಂಚಾರವನ್ನು ಇದೀಗ ಸರಿಮಾಡಲಾಗಿದೆ. ಹಲವು ಸೂಚನೆಗಳೊಂದಿಗೆ ವಾಹನ ಓಡಾಟಕ್ಕೆ ಅವಕಾಶ ನೀಡಲಾಗಿದೆ.
ಹೆದ್ದಾರಿ ಅಂಚಿನಲ್ಲಿ ಭೂ ಕುಸಿತ ವಲಯ ಎಂದು ನಾಮಫಲಕ ಅಳವಡಿಸಬೇಕು. ಭಾರೀ ಗಾತ್ರದ ವಾಹನಗಳು ಪ್ರತಿ ಗಂಟೆಗೆ 20ಕಿಮೀ ವೇಗದಲ್ಲಿ ಸಂಚರಿಸಬೇಕು. ಗಂಗಾವಳಿ ನದಿ ಬದಿಗೆ ಬೂಮ್ ತಡೆಗೋಡೆ ನಿರ್ಮಿಸಬೇಕು. ಅಂಕೋಲಾ, ಕುಮಟಾ ರಸ್ತೆಯ ಎರಡು ಕಡೆ ಹಳದಿ ಸಿಗ್ನಲ್ ಲೈಟ್ ಅಳವಡಿಸಬೇಕು. ಗುಡ್ಡ ಕುಸಿತ ಪ್ರದೇಶದಲ್ಲಿ ಬೆಳಕಿನ ವ್ಯವಸ್ಥೆ ಮಾಡಿ, ಗುಡ್ಡದ ನೀರು ನದಿ ಸೇರಲು ಮಾರ್ಗ ನಿರ್ಮಿಸಬೇಕು. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ನೀಡಬೇಕು. ಅನಗತ್ಯವಾಗಿ ಆ ಭಾಗದಲ್ಲಿ ವಾಹನ ನಿಲುಗಡೆ ಆಗದಂತೆ ತಡೆಯಬೇಕು. ಜೊತೆಗೆ ಸಿಬ್ಬಂದಿ ಮೂಲಕ ಗುಡ್ಡ ಪ್ರದೇಶಗಳ ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಜಿಯಾಜಿಕಲ್ ಸರ್ವೆ ಆಫ್ ಇಂಡಿಯಾ ಹಾಗೂ ಇಂಡಿಯನ್ ಇನ್ಸಿಟಿಯೂಟ್ ಆಫ್ ಸೈನ್ಸ್ ವರದಿ ಆಧರಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರಿಗೆ ಪತ್ರ ಬರೆದಿದ್ದು, ಸುಗಮ ಸಂಚಾರಕ್ಕೆ ಅಗತ್ಯವಿರುವ ಎಲ್ಲಾ ಕ್ರಮ ಜರುಗಿಸುವಂತೆ ತಿಳಿಸಿದ್ದಾರೆ.

Leave a comment

Leave a Reply

You cannot copy content of this page