ಶಿರಸಿ: ಕೊಳಗಿಬೀಸ್’ನ ಮಾರುತಿ ಹೊಟೇಲ್’ನಲ್ಲಿ ಕೆಲಸ ಮಾಡುತ್ತಿದ್ದ ಕಲ್ಪನಾ ಮಂಜುನಾಥ ನಾಯ್ಕ (50) ಎಂಬಾತರಿಗೆ ಬೈಕ್ ಡಿಕ್ಕಿಯಾಗಿದೆ.. ಪರಿಣಾಮ ಅವರು ಶಿರಸಿಯ ಮಾರಿಕಾಂಬಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೊಟೇಲ್ ಕೆಲಸ ಮಾಡುವ ಬೈಂದೂರು ಅಭಿಷೇಕ ಮಹಾಬಲೇಶ್ವರ ದೇವಾಡಿಗ (25) ಎಂಬಾತರು ಹಿಂದಿನಿAದ ಬಂದು ಬೈಕ್ ಗುದ್ದಿದ್ದು, ಅವರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಕಲ್ಪನಾ ಅವರು ಜುಲೈ 30ರಂದು ಸಂಜೆ 7.45ಕ್ಕೆ ಕೆಲಸ ಮುಗಿಸಿ ಶಿರಸಿ-ಕುಮಟಾ ಹೆದ್ದಾರಿಯಲ್ಲಿ ನಡೆದು ಹೋಗುತ್ತಿದ್ದರು. ಆಗ ಶಿರಸಿ ಕಡೆಯಿಂದ ವೇಗವಾಗಿ ಬೈಕ್ ಓಡಿಸಿಕೊಂಡು ಬಂದ ಅಭಿಷೇಕ್ ಏಕಾಏಕಿ ಎಡಗಡೆ ಬಂದು ಕಲ್ಪನಾ ಅವರಿಗೆ ಬೈಕ್ ಗುದ್ದಿದ್ದಾರೆ. ಇದರಿಂದ ಕಲ್ಪನಾ ಅವರ ಕೈ – ಕಾಲು, ತಲೆಗೆ ಪೆಟ್ಟಾಗಿದೆ.




Discussion about this post