ಯಲ್ಲಾಪುರ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸಿದ್ದು, ಖಾಲಿ ಚಂಬುಗಳನ್ನು ಪ್ರದರ್ಶಿಸಿದರು.
ಎಪಿಎಂಸಿ ಆವರಣದಲ್ಲಿ ಪ್ರತಿಭಟಿಸಿದ ಕಾಂಗ್ರೆಸಿಗರು ಕೇಂದ್ರ ಸರಕಾರ ಬಜೆಟ್ ಅನುದಾನ ಹಂಚಿಕೆ ಮಾಡುವಲ್ಲಿ ತಾರತಮ್ಯ ಮಾಡಿದೆ ಎಂದು ದೂರಿದರು. ಕೇಂದ್ರಕ್ಕೆ ರಾಜ್ಯದಿಂದ ಸಿಕ್ಕ ಕೊಡುಗೆ ಶೂನ್ಯ ಎಂದು ಆರೋಪಿಸಿದರು. ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಆತ್ಮಾವಲೋಕನಕ್ಕೆ ಬಾರದ ಅಂಜಲಿ
ನoತರ ನಡೆದ ಕಾರ್ಯಕರ್ತರ ಆತ್ಮಾವಲೋಕನ ಸಮಾವೇಶದಲ್ಲಿ ಸಹ ಚಂಬಿನ ವಿಷಯ ಪ್ರತಿಧ್ವನಿಸಿತು. ಕಾರ್ಯಕರ್ತರ ಸಮಾವೇಶದಲ್ಲಿ ಲೋಕಸಭಾ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಗೈರಾಗಿದ್ದರು.
Discussion about this post