ಕಾರವಾರ: `ಬೈತಕೋಲ್, ಅರ್ಗಾ, ಚೆಂಡಿಯಾ, ಇಡೂರ್, ಜಡಿಗದ್ದೆ ಮುಖಾಂತರ ಬೆಟ್ಟದ ಅಂಚಿನಲ್ಲಿ ನೌಕಾನೆಲೆಯವರು ರಸ್ತೆ ಕಾಮಗಾರಿ ನಡೆಸುತ್ತಿದ್ದು, ಗುಡ್ಡದ ಕೆಳಗಿನ ಭಾಗದಲ್ಲಿ ವಾಸಿಸುವ ಜನರ ಮೇಲೆ ಮಣ್ಣು ಬೀಳುವ ಸಾಧ್ಯತೆಯಿದೆ. ಹೀಗಾಗಿ ಗುಡ್ಡದ ಬುಡದಲ್ಲಿರುವವರು ಪ್ರಾಣ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ’ ಎಂದು ಶಾಸಕ ಸತೀಶ್ ಸೈಲ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇದರೊಂದಿಗೆ ಅರ್ಗಾ, ಚೆಂಡಿಯಾ, ಇಡೂರ್ ಭಾಗದಲ್ಲಿ ಆಗಾಗ ನೆರೆ ಉಂಟಾಗುತ್ತಿರುವುದಕ್ಕೆ ಅವೈಜ್ಞಾನಿಕ ರಸ್ತೆ ಕಾಮಗಾರಿ ಜೊತೆ ನೌಕಾನೆಲೆಯವರ ಅಚಾತುರ್ಯವೂ ಕಾರಣ ಎಂದು ಶಾಸಕ ಸತೀಶ್ ಸೈಲ್ ದೂರಿದ್ದಾರೆ. `15 ದಿನದ ಹಿಂದೆ ನೌಕಾನೆಲೆಯವರು ಬೆಟ್ಟದ ನೀರು ಹರಿದು ಹೋಗುವುದನ್ನು ತಡೆದಿದ್ದರು. ಇದರಿಂದ ಮನೆಗಳಿಗೆ ನೀರು ನುಗ್ಗಿ ಜನ ತೊಂದರೆ ಅನುಭವಿಸಿದರು. ನಾನು ಅಧಿವೇಶನದಿಂದ ಅರ್ದಕ್ಕೆ ಎದ್ದುಬಂದು ಆ ಭಾಗದ ಸಮಸ್ಯೆ ನಿವಾರಿಸಿದೆ. ಇದೀಗ ಮತ್ತೆ ಅಡೆ ತಡೆ ಉಂಟಾಗಿ ಜನರ ಮನೆಗೆ ನೀರು ನುಗ್ಗುತ್ತಿದೆ’ ಎಂದು ಸೈಲ್ ವಿವರಿಸಿದರು.
ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು ಎಂದು ಅವರು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ.
Discussion about this post