ಯಲ್ಲಾಪುರ: ಶುಕ್ರವಾರ ಬೆಳಗ್ಗೆ ಮಲೆನಾಡಿನ ಎಲ್ಲಾ ಮಕ್ಕಳು ಶಾಲೆಯಲ್ಲಿ ಪಾಠ ಕಲಿಯುತ್ತಿದ್ದರೆ ಲಿಂಗನಕೊಪ್ಪ ಶಾಲೆಯ ಮಕ್ಕಳು ಮಾತ್ರ ಗದ್ದೆ ಕೆಲಸಕ್ಕೆ ಹೋಗಿದ್ದರು!
ಅದೇ ಶಾಲೆಯಲ್ಲಿ ಕಲಿಯುವ ಶ್ರೇಯಾ ಮರಾಠಿ ಅವರ ಹೊಲದಲ್ಲಿ ಗದ್ದೆ ನಾಟಿ ನಡೆದಿದ್ದು, ಶಾಲೆಯ 20 ಮಕ್ಕಳು ಆಗಮಿಸಿ ಒಂದು ಗದ್ದೆಯ ನಾಟಿ ಕಾರ್ಯ ಮುಗಿಸಿದರು. ಹೊಲದ ಮಾಲಕ ಸೋಮಣ್ಣ ಮರಾಠಿ ಸಹ ಮನೆಗೆ ಬಂದ ಪುಠಾಣಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡು ಸಿಹಿತಿಂಡಿ ನೀಡಿ ಉಪಚರಿಸಿದರು. ನಂತರ ಗದ್ದೆಗೆ ಕರೆದುಕೊಂಡು ಹೋಗಿ ಕೃಷಿ ಕಾಯಕದ ಕುರಿತು ಮಾಹಿತಿ ನೀಡಿದರು. ಶಿಕ್ಷಕಿ ಸೌಮ್ಯಾ ಭಾಗ್ವತ್ ಸಹ ಗದ್ದೆಗೆ ಇಳಿದು ಆಹಾರ ಬೆಳೆಗಳ ಮಹತ್ವದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು.
`7ನೇ ತರಗತಿ ವಿದ್ಯಾರ್ಥಿಗಳಿಗೆ ಗದ್ದೆ ನಾಟಿಯ ಬಗ್ಗೆ ಪಾಠವಿದೆ. ಕೇಳಿ-ತಿಳಿ, ಮಾಡಿ – ಕಲಿ ಎಂಬ ಮಾತಿನಂತೆ ಪಾಠದ ಅಂಗವಾಗಿ ಮಕ್ಕಳಿಗೆ ಗದ್ದೆ ನಾಟಿಯ ಪ್ರಯೋಗ ನಡೆಸಲಾಯಿತು’ ಎಂದು ಶಾಲಾ ಮುಖ್ಯಾಧ್ಯಾಪಕ ವಿನಾಯಕ ಹೆಗಡೆ ತಿಳಿಸಿದರು. `ಒಟ್ಟು ಒಂದುವರೆ ತಾಸು ಗದ್ದೆಯಲ್ಲಿ ಕೆಸರಾಟ ನಡೆಸಿದ ಮಕ್ಕಳು ನಂತರ ತರಗತಿಗೆ ಮರಳಿದರು. ಚಿಣ್ಣರ ಕೃಷಿ ಕಾಯಕದ ಬಗ್ಗೆ ಊರಿನವರು ಮೆಚ್ಚುಗೆ ವ್ಯಕ್ತಪಡಿಸಿದರು.
ಲಿಂಗನಕೊಪ್ಪ ಶಾಲಾ ಮಕ್ಕಳ ಗದ್ದೆ ನಾಟಿಯ ವಿಡಿಯೋ ಇಲ್ಲಿ ನೋಡಿ..




Discussion about this post