6 Skip to content

ಅಣೆಕಟ್ಟಿನಿಂದ ಹೊರಬಂದ ರಭಸ ನೀರು: ಮನಸೂರೆಗೊಂಡ ಕೃತಕ ಜಲಪಾತ

ಸಾಗರದ ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರಬಿಡಲಾಗಿದ್ದು, ಶರಾವತಿ ನದಿ ಮೂಲಕ ಆ ನೀರು ಹೊನ್ನಾವರದ ಗೇರುಸೊಪ್ಪಕ್ಕೆ ಆಗಮಿಸಿದೆ. ಹೀಗಾಗಿ ಇಲ್ಲಿನ ಅಣೆಕಟ್ಟು ಸಹ ಭರ್ತಿಯಾಗಿದೆ. ಅಣೆಕಟ್ಟು ಸುರಕ್ಷತೆ ದೃಷ್ಟಿಯಿಂದ ಶುಕ್ರವಾರ ಸಂಜೆ ಗೇರುಸೊಪ್ಪ ಜಲಾಶಯದಿಂದ 51835 ಕ್ಯುಸೆಕ್ ನೀರು ಹೊರಬಿಡಲಾಯಿತು.
ಜಲಾಶಯದಿಂದ ನೀರು ಹೊರಬಿಡುವ ಕಾರಣದಿಂದ ಸಂತ್ರಸ್ತರಾಗುವ 130 ಕುಟುಂಬದ ಜನರನ್ನು ಸ್ಥಳಾಂತರಿಸುವ ಕೆಲಸ ನಡೆದಿದೆ. ಜಿಲ್ಲೆಯಲ್ಲಿ ಈವರೆಗೆ 14 ಕಾಳಜಿ ಕೇಂದ್ರದಲ್ಲಿ 503 ಜನರು ಆಶ್ರಯ ಪಡೆದಿದ್ದಾರೆ.
ಗೇರುಸೊಪ್ಪ ಜಲಾಶಯದಿಂದ ನೀರು ಹೊರಬರುದ ದೃಶ್ಯಾವಳಿಗಳನ್ನು ಇಲ್ಲಿ ನೋಡಿ..

 

Leave a comment

Leave a Reply

You cannot copy content of this page