ಕಾರವಾರ: ರೋಟರಿ ಶತಾಬ್ಧಿ ಭವನದಲ್ಲಿ ನಡೆದ ರೋಟರಿ ಕ್ಲಬ್ ಪದಗ್ರಹಣ ಸಮಾರಂಭದಲ್ಲಿ ಕ್ಲಬ್ಬಿನ ನೂತನ ಅಧ್ಯಕ್ಷರಾಗಿ ಮಾರುತಿ ಪಿ ಕಾಮತ ಅಧಿಕಾರ ಸ್ವೀಕರಿಸಿದರು.
ಕಾರ್ಯದರ್ಶಿ ಆನಂದ ನಾಯ್ಕ, ಖಜಾಂಚಿ ಗುರು ಹೆಗ್ಡೆ ಪ್ರಮಾಣ ವಚನ ಓದಿದರು. ಗೋವಾದಿಂದ ಆಗಮಿಸಿದ ಡಾ ಲೆನ್ನಿ ಡಾ ಕೊಸ್ಟಾ ಪದಗ್ರಹಣ ಬೋಧಿಸಿದರು. ನಂತರ ಮಾತನಾಡಿದ ಅವರು `ರೋಟರಿ ಸಂಸ್ಥೆಯ ಸದಸ್ಯರು ಬಡವರಿಗೆ ಜೀವನೋಪಾಯವನ್ನು ಕಲ್ಪಿಸುವುದರ ಮೂಲಕ ವಿಶ್ವಶಾಂತಿಗಾಗಿ ಶ್ರಮಿಸುತ್ತಿದ್ದಾರೆ’ ಎಂದರು. ರಾಮಕೃಷ್ಣ ಆಶ್ರಮದ ಭಾವೇಶಾನಂದ ಸ್ವಾಮೀಜಿ ಈ ವೇಳೆ ಆಶಿರ್ವಚನ ನೀಡಿದರು. ಡಾ ಸಮೀರ ಕುಮಾರ ಟಿ ನಾಯಕ ಹಾಗೂ ಗುರುರಾಜ ವಿ ಭಟ್ ಇದ್ದರು.
ಕಾರವಾರ ರೋಟರಿಗೆ ಮಾರುತಿ ಸಾರಥ್ಯ

Leave a comment