ಶಿರಸಿ: ದೆಹಲಿಯಲ್ಲಿ ರೈಲ್ವೆ ಸಚಿವ ವಿ ಸೋಮಣ್ಣ ಅವರನ್ನು ಭೇಟಿ ಮಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿವಿಧ ರೈಲು ಯೋಜನೆಗಳ ನಿರ್ಮಾಣಕ್ಕೆ ಒತ್ತಾಯಿಸಿದರು.
ಹುಬ್ಬಳ್ಳಿ-ಅಂಕೋಲಾ, ತಾಳಗುಪ್ಪ- ಶಿರಸಿ – ಹುಬ್ಬಳ್ಳಿ, ತಾಳಗುಪ್ಪ- ಹೊನ್ನಾವರ, ಧಾರವಾಡ -ಕಿತ್ತೂರು- ಹುಬ್ಬಳ್ಳಿ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಅವರು ಆಗ್ರಹಿಸಿದರು. ಇದರೊಂದಿಗೆ ವಾಸ್ಕೋ- ಬೆಳಗಾವಿ- ಮೀರಜ್ ಪ್ಯಾಸೆಂಜರ್ ಹಾಗೂ ಕ್ಯಾಸಲ್ ರಾಕ್- ಮೀರಜ್- ಕ್ಯಾಸಲ್ ರಾಕ್ ರೈಲು ಪ್ರಾರಂಭಿಸುವAತೆ ಮನವಿ ಮಾಡಿದರು.
ಕುಮಟಾ ಮತ್ತು ಗೋಕರ್ಣ ರೈಲ್ವೆ ನಿಲ್ದಾಣದಲ್ಲಿ ಎರಡನೇ ಪ್ಲಾರ್ಟಪಾರಂ ನಿರ್ಮಾಣ, ಕೊಂಕಣ ರೈಲ್ವೆಯಲ್ಲಿ ಸಂಚರಿಸುವ ರೈಲುಗಳಲ್ಲಿ ಜಿಲ್ಲೆಯ ಪ್ರಯಾಣಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ಹಾಗೂ ಅಗತ್ಯವಿರುವ ಕಡೆ ಮೇಲ್ಸೆತುವೆ ಮತ್ತು ಅಂಡರ್‌ಪಾಸ್ ನಿರ್ಮಾಣಕ್ಕೆ ಒತ್ತಾಯಿಸಿದರು.
ಈ ಎಲ್ಲಾ ಬೇಡಿಕೆಗಳಿಗೆ ಪೂರಕವಾಗಿ ಸಚಿವರು ಸ್ಪಂದಿಸಿರುವುದಾಗಿ ಕಾಗೇರಿ ಹೇಳಿದ್ದಾರೆ.
ರೈಲ್ವೆ ಸಚಿವರನ್ನು ಭೇಟಿ ಮಾಡಿದ ಸಂಸದ: ಬೇಡಿಕೆಗಳೇನು? ನಿರೀಕ್ಷೆಗಳೇನು?

Leave a comment