ಶಿರಸಿ: ಭೂಮಿ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟವು ತಾತ್ವಿಕ ಹಂತಕ್ಕೆ ತಲುಪಿದ್ದು `ತನ್ನ ಜೀವಿತ ಅವಧಿಯಲ್ಲಿಯೇ ಭೂಮಿ ಹಕ್ಕು ವಿತರಣೆ ನೋಡುವ ಆಸೆ’ ಎಂದು 91 ವರ್ಷದ ಸಾಮಾಜಿಕ ಹೋರಾಟಗಾರ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. `ತನ್ನ ಜೀವಿತ ಅವಧಿಯ ಕೊನೆ ದಿನದವರೆಗೂ ಅರಣ್ಯ ಅತಿಕ್ರಮಣದಾರರ ಪರ ಹೋರಾಡುವೆ’ ಎಂದು ಅವರು ಭಾವುಕರಾಗಿ ಹೇಳಿದ್ದಾರೆ.
ಶುಕ್ರವಾರ ಸಾಗರ ತಾಲೂಕಿನ ಅವರ ಗೃಹ ಕಛೇರಿಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ನಡೆಸಿದ `ದಶಲಕ್ಷ ಗಿಡ ನೆಡುವ ಅಭಿಯಾನ’ದ ಲಾಂಛನ ಬಿಡುಗಡೆ ಮಾಡಿ ನಂತರ ಮಾತನಾಡಿದರು.
`ಅರಣ್ಯವಾಸಿಗಳೇ ಪರಿಸರ ಜಾಗೃತಿ ಅಂಗವಾಗಿ 10 ಲಕ್ಷ ಗಿಡ ನೆಡುವ ಕಾರ್ಯವು ದೇಶಕ್ಕೆ ಮಾದರಿಯಾಗಿದೆ. ಅರಣ್ಯ ಉಳಿಸಿ- ಅರಣ್ಯ ಅವಲಂಬಿತರಿಗೆ ಭೂಮಿಹಕ್ಕು ನೀಡುವದು ಸರಕಾರದ ಜವಾಬ್ದಾರಿ’ ಎಂದು ಹೇಳಿದರು. `ಅರಣ್ಯವಾಸಿಗಳು ಗಿಡ ನೆಟ್ಟು ಪೋಷಿಸಬೇಕು’ ಎಂದು ಕರೆ ನೀಡಿದರು.
ಈ ವೇಳೆ ಕಾಗೋಡು ತಿಮ್ಮಪ್ಪ ಅವರು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರಿಗೆ ಸಾಕೇತಿಕವಾಗಿ ಗಿಡ ನೀಡಿದರು.




Discussion about this post