`ಈಗಿನ ನಿಯಮಾವಳಿಗಳ ಪ್ರಕಾರ ಅನಧಿಕೃತ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಮನೆ ಕೊಡಲು ಅವಕಾಶವಿಲ್ಲ. ಆದರೂ, ಅನಧಿಕೃತ ಜಾಗದಲ್ಲಿರುವ ಮನೆ ಹಾನಿಗೂ 1.20 ಲಕ್ಷ ರೂ ಜೊತೆ ಮನೆಯನ್ನು ನಿರ್ಮಿಸಿಕೊಡಲಾಗುತ್ತದೆ’ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಶಿರೂರಿಗೆ ಭೇಟಿ ನೀಡಿ ಸಂತ್ರಸ್ತರ ಕುಟುಂಬಕ್ಕೆ ಸಾಂತ್ವಾನ ಹೇಳಿದ ಅವರು ವೈಯಕ್ತಿಕವಾಗಿ 1.5 ಲಕ್ಷ ರೂ ನೆರವು ನೀಡಿದರು. ಕುಟುಂಬದಲ್ಲಿ ಒಬ್ಬರಿಗೆ ನೌಕರಿ ಕೊಡಿಸುವ ಭರವಸೆ ನೀಡಿದರು. ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು ಉಳುವರೆಯಲ್ಲಿ ಮನೆ ಕಳೆದುಕೊಂಡ ಎಲ್ಲರಿಗೂ ಮನೆ ಮಂಜೂರಿ ಮಾಡಲಾಗುತ್ತದೆ. ಸಂತ್ರಸ್ತರು ಮನೆ ಬೇಕು ಎಂಬ ಬೇಡಿಕೆ ಇಟ್ಟಿದ್ದು, ಮನೆ ಕಳೆದುಕೊಂಡವರಿಗೆ ಮನೆ ಕೊಡುವುದು ನಮ್ಮ ಜವಾಬ್ದಾರಿ’ ಎಂದರು.
ಶನಿವಾರ ಶಿರೂರಿಗೆ ಭೇಟಿ ನೀಡಿದ ಶಿಕ್ಷಣ ಸಚಿವರು ಮಾಡಿದ್ದೇನು? ಮಾತನಾಡಿದ್ದೇನು? ವಿಡಿಯೋ ಇಲ್ಲಿ ನೋಡಿ..
ಮಳೆಯಿಂದ ಮನೆ ಹಾನಿ: ಪರಿಹಾರದ ಜೊತೆ ಹೊಸ ಮನೆ ಕೊಡಲು ಸರ್ಕಾರ ನಿರ್ಧಾರ!

Leave a comment