6 Skip to content

ನಿನ್ನೆ ಮನವಿ – ಇಂದು ಮಂಜೂರಿ: ಮೋದಿ ಸರ್ಕಾರ ಇಷ್ಟೊಂದು ಸ್ಪೀಡಾ?!

ಶುಕ್ರವಾರ ರೈಲ್ವೆ ರಾಜ್ಯ ಸಚಿವ ಸೋಮಣ್ಣ ಅವರನ್ನು ಭೇಟಿ ಮಾಡಿದ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿವಿಧ ಬೇಡಿಕೆಗಳ ಪಟ್ಟಿ ಸಲ್ಲಿಸಿದ್ದರು. ಅದಕ್ಕೆ ತ್ವರಿತವಾಗಿ ಸ್ಪಂದಿಸಿದ ಸೋಮಣ್ಣ ಅದರಲ್ಲಿ ಒಂದು ಬೇಡಿಕೆಯನ್ನು ಒಂದೇ ದಿನದಲ್ಲಿ ಈಡೇರಿಸಿದ್ದಾರೆ.
ಸಂಸದ ವಿಶ್ವೇಶ್ವರ ಹೆಗಡೆ ಸಲ್ಲಿಸಿದ ಬೇಡಿಕೆಯಲ್ಲಿ ರೈಲು ನಿಲುಗಡೆ ಅಂಶ ಸಹ ಸೇರಿತ್ತು. `ತಾಳಗುಪ್ಪ ಮೈಸೂರು ಎಕ್ಸಪ್ರೆಸ್ ರೈಲಿಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ನಿಲುಗಡೆ ಇಲ್ಲ. ಇದರಿಂದ ಉತ್ತರ ಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಕಾಗೇರಿ ಮನವರಿಕೆ ಮಾಡಿದ್ದರು. ಮಲ್ಲೇಶ್ವರದಲ್ಲಿ ಸಹ ನಿಲುಗಡೆಗೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿದ್ದರು.
ಈ ಹಿನ್ನಲೆ ಸೋಮಣ್ಣ ಅವರು 22 ಅಕ್ಟೊಬರ್ 2024ರಿಂದ ಮಲ್ಲೇಶ್ವರದಲ್ಲಿ ಸಹ ಈ ರೈಲು ನಿಲುಗಡೆಯಾಗಲಿದೆ. ಪ್ರಾಯೋಗಿಕವಾಗಿ ಈ ಕ್ರಮ ಜರುಗಿಸಿದ್ದು, ಜನ ಪ್ರಯೋಜನ ಪಡೆಯಬೇಕು’ ಎಂದು ತಮ್ಮ ಎಕ್ಸ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಲ್ಲಿಸಿದ ಉಳಿದ ಬೇಡಿಕೆಗಳ ಪಟ್ಟಿ ಸಹ ಅವರ ಕಡತದಲ್ಲಿ ಹಾಗೇ ಇದ್ದು, ಅದನ್ನು ಈಡೇರಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.

Leave a comment

Leave a Reply

You cannot copy content of this page