ಇಡೀ ದೇಶವೇ ಶಿರೂರು ಗುಡ್ಡ ಕುಸಿತ ವಿಷಯವಾಗಿ ಕಂಬನಿ ಹಾಕುತ್ತಿದ್ದರೆ ಇಲ್ಲೊಬ್ಬ ವ್ಯಕ್ತಿ `ತಾನು ಕಂಡ ಸತ್ಯ’ ಎಂಬ ವಿಡಿಯೋ ಹರಿಬಿಟ್ಟಿದ್ದಾನೆ.
`ಶಿರೂರು ಗುಡ್ಡ ಕುಸಿತದಿಂದ ಹೆದ್ದಾರಿ ಮೇಲೆ ಬಿದ್ದ ಮಣ್ಣನ್ನು ಐ ಆರ್ ಬಿ ಕಂಪನಿ ಗಂಗಾವಳಿ ನದಿಗೆ ಸುರಿದಿದ್ದು, ಈ ಕಾರಣದಿಂದಲೇ ನದಿ ಆಳದಲ್ಲಿ ಸಿಲುಕಿದ ಶವಗಳು ಸಿಕ್ಕಿಲ್ಲ. ಜುಲೈ 17ರಂದು ಈ ಕಾರ್ಯಾಚರಣೆಯನ್ನು ತಾನು ಪ್ರತ್ಯಕ್ಷವಾಗಿ ನೋಡಿದ್ದೇನೆ. ಆ ವೇಳೆ ಜಿಲ್ಲಾಧಿಕಾರಿಯೂ ಅಲ್ಲಿರಲಿಲ್ಲ. ಸಚಿವರೂ ಬಂದಿರಲಿಲ್ಲ’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣಕುಮಾರ ಬಣ) ತಾಲೂಕಾ ಅಧ್ಯಕ್ಷ ಎಂದು ಹೇಳಿಕೊಂಡಿರುವ ನಾಗರಾಜ ಶೇಟ್ ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾನೆ.
`ಶಿರೂರಿನಲ್ಲಿ ಗುಡ್ಡ ಕುಸಿದಲ್ಲಿ ಸಾವನಪ್ಪಿದವರ ಶವ ಸಿಗದೇ ಇರಲು ಸರ್ಕಾರದ ವೈಫಲ್ಯವೇ ಕಾರಣ. ಐ ಆರ್ ಬಿ ಕಂಪನಿ ಗುಡ್ಡದ ಮಣ್ಣನ್ನು ಗಂಗಾವಳಿ ನದಿಗೆ ಹಾಕಿ ಶವವನ್ನು ಕಣ್ಮರೆ ಮಾಡಿದೆ’ ಎಂದು ಆತ ದೂರಿದ್ದಾನೆ. `ಜಿಲ್ಲಾಡಳಿತದ ಅಧಿಕಾರಿಗಳು ಅಲ್ಲಿದ್ದು ಐ ಆರ್ ಬಿ ಕಂಪನಿಗೆ ಮಾರ್ಗದರ್ಶನ ಮಾಡಬೇಕಿತ್ತು. ಆದರೆ, ಅವರು ಹಾಗೇ ಮಾಡಿಲ್ಲ. ಗುಡ್ಡ ಕುಸಿಯದಂತೆ ಎಚ್ಚರಿಕೆವಹಿಸುವ ಕೆಲಸವನ್ನು ನೋಡಿಕೊಂಡಿಲ್ಲ. ಗುಡ್ಡ ಕುಸಿತ ಪ್ರಮಾಣ ನೋಡಿದರೆ ಸರ್ಕಾರದ ವೈಫಲ್ಯ ಎದ್ದು ತೋರುತ್ತದೆ’ ಎಂಬರ್ಥದಲ್ಲಿನ ವಿಡಿಯೋ ಇದಾಗಿದೆ.
ನಾಗರಾಜ ಶೇಟ್ ವಿಡಿಯೋದಲ್ಲಿ ಇನ್ನೂ ಏನೇನಿದೆ? ಇಲ್ಲಿ ನೋಡಿ..




Discussion about this post