6 Skip to content

ಮುಂದುವರೆದ ಮಳೆ: ಶಾಲೆಗೆ ಇಲ್ಲ ರಜೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಸೋಮವಾರ ಶಾಲಾ-ಕಾಲೇಜಿಗೆ ರಜೆ ಘೋಷಣೆ ಆಗಿಲ್ಲ.
ಮಳೆ ಕಾರಣದಿಂದ ಸತತ ರಜೆ ನೀಡಿದ ಹಿನ್ನಲೆ ಮಕ್ಕಳ ವಿದ್ಯಾಬ್ಯಾಸಕ್ಕೆ ಹಿನ್ನಡೆ ಆಗುತ್ತಿರುವ ಬಗ್ಗೆ ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದರು. ಜೊತೆಗೆ ಮುಂದಿನ ದಿನಗಳಲ್ಲಿ ರಜೆ ಹೊಂದಾಣಿಕೆ ಮಾಡಿಕೊಂಡು ಪಾಠ ಮಾಡುವಂತೆ ಸೂಚಿಸಿದ್ದರಿಂದ ಮಕ್ಕಳಿಗೆ ಒತ್ತಡ ಹೆಚ್ಚಾಗಲಿದೆ ಎಂಬ ಅಭಿಪ್ರಾಯ ವ್ಯಾಪಕವಾಗಿದೆ..
ಮೊದಲಿಗೆ ಹೋಲಿಸಿದರೆ ಇದೀಗ ಮಳೆ ಪ್ರಮಾಣ ಕಡಿಮೆಯಾಗಿದೆ. ಕಳೆದ ವಾರ ಆರೆಂಜ್ ಅಲರ್ಟ ಘೋಷಣೆಯಲ್ಲಿದ್ದರೂ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ರಜೆ ನೀಡಲಾಗಿತ್ತು. ಅಗಸ್ಟ್ 5ರ ಸೋಮವಾರದಿಂದ ಜಿಲ್ಲೆಯ ಶಾಲಾ ಕಾಲೇಜುಗಳು ಬಾಗಿಲು ತೆರೆಯಲಿದೆ. ತರಗತಿಗಳು ಶುರುವಾಗಲಿದೆ.

Leave a comment

Leave a Reply

You cannot copy content of this page