ಅಗಸ್ಟ್ 5ರಂದು ಶಾಲಾ ಕಾಲೇಜಿಗೆ ರಜೆ ಘೋಷಿಸಿರುವ ಬಗ್ಗೆ ಜಿಲ್ಲಾಧಿಕಾರಿ ಆದೇಶವನ್ನು ತಿದ್ದುಪಡಿ ಮಾಡಿ ಕಿಡಿಗೇಡಿಗಳು ಹರಿಬಿಟ್ಟಿದ್ದಾರೆ. ಹೀಗಾಗಿ `ಜಿಲ್ಲಾಧಿಕಾರಿ ಆದೇಶವಿದ್ದರೂ ರಜೆ ಇಲ್ಲ’ ಎಂದು ವರದಿ ಮಾಡಿದ ಮಾಧ್ಯಮಗಳನ್ನು ಅನೇಕರು ಪ್ರಶ್ನಿಸುತ್ತಿದ್ದಾರೆ.
ಅಗಸ್ಟ 2ರಂದು ಆದೇಶ ಹೊರಡಿಸಿದ್ದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅಗಸ್ಟ್ 3ರಂದು ಶಾಲಾ ಕಾಲೇಜಿಗೆ ರಜೆ ಘೋಷಿಸಿದ್ದರು. ಅದೇ ಆದೇಶ ಪ್ರತಿಯನ್ನು ತಿದ್ದುಪಡಿ ಮಾಡಿದ ಕಿಡಿಗೇಡಿಗಳು ಅಗಸ್ಟ 5ರಂದು ರಜೆ ಎಂದು ನಮೂದಿಸಿ ಹರಿಬಿಟ್ಟಿದ್ದಾರೆ. ಸೋಮವಾರದಿಂದ ಎಂದಿನoತೆ ಶಾಲೆ ಶುರುವಾಗಿದ್ದು, ಈವರೆಗಿನ ಮಾಹಿತಿ ಪ್ರಕಾರ ರಜೆ ಘೋಷಣೆ ಆಗಿಲ್ಲ.
`ಸುಳ್ಳು ಸುದ್ದಿ ಡಿಲಿಟ್ ಮಾಡಿ ಸತ್ಯವನ್ನು ಶೇರ್ ಮಾಡಿ’




Discussion about this post