6 Skip to content

ಗೋವಾಗೆ ಹೋಗಿ ಸಾವನಪ್ಪಿದ ಮದ್ಯ ವ್ಯಸನಿ!

ಕಾರವಾರ: ಮಾಜಾಳಿ ಗಾಂವಗೇರಿ ದೀಪಕ ಪ್ರಕಾಶ ನಾಯ್ಕ (36) ವಿಪರೀತ ಸರಾಯಿ ಕುಡಿದು ಸಾವನಪ್ಪಿದ್ದಾರೆ.
ಏಕಾಂಗಿಯಾಗಿ ವಾಸಿಸುತ್ತಿದ್ದ ಅವರು ಆಗಾಗ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಅಲ್ಲಿ ಸಿಕ್ಕ ಹಣವನ್ನು ಪೂರ್ತಿಯಾಗಿ ವ್ಯಸನಕ್ಕೆ ಬಳಸುತ್ತಿದ್ದರು. ಅಗಸ್ಟ 3ರಂದು ಮದ್ಯ ಸೇವಿಸಿ ಬಿದ್ದುಕೊಂಡಿದ್ದ ಅವರನ್ನು ನಿವೃತ್ತ ನೌಕರ ಸುರೇಶ್ ನಾಯ್ಕ ಗಮನಿಸಿದ್ದರು. ಮಾನವೀಯ ನೆಲೆಯಲ್ಲಿ ಅವರು ದೀಪಕ ನಾಯ್ಕರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರ ಸೂಚನೆ ಮೇರೆಗೆ ಗೋವಾದ ಬಾಂಬೋಲಿಯo ಆಸ್ಪತ್ರೆಗೂ ಕರೆದೊಯ್ದರು. ಆದರೆ, ಅಗಸ್ಟ್ 5ರಂದು ದೀಪಕ ನಾಯ್ಕ ಸಾವನಪ್ಪಿದ್ದಾರೆ.

Leave a comment

Leave a Reply

You cannot copy content of this page