ಓದಿಗೆ ತಕ್ಕ ಉದ್ಯೋಗ ದೊರೆತಿಲ್ಲ ಎಂದು ಕಲಗದ್ದೆಯ ನಂದನ್ ಸುಮ್ಮನೆ ಕೂರಲಿಲ್ಲ. ಐಟಿಐ ಓದು ಮುಗಿದ ತಕ್ಷಣ ಕುರಿ ಕಾಯಲು ಹೋದ 19 ವರ್ಷದ ಈತ ಇದೀಗ 19 ಕುರಿಮರಿಗಳ ಒಡೆಯ!
ಸಿದ್ದಾಪುರ ತಾಲೂಕಿನ ತ್ಯಾಗಲಿ ಬಳಿಯ ಕಲಗದ್ದೆಯ ನಂದನ್ ಓದು ಮುಗಿಸಿದ್ದ. ಆದರೆ, ಒದಿಗೆ ತಕ್ಕ ಉದ್ಯೋಗ ಸಿಕ್ಕಿರಲಿಲ್ಲ. ಆ ಅವಧಿಯಲ್ಲಿ ಕೊರೊನಾ ಬೇರೆ ಜೋರಾಗಿತ್ತು. ನರೆಗಾ ಯೋಜನೆಯ ಕೂಲಿ ಕೆಲಸ ಈತನ ಕೈ ಹಿಡಿದಿತ್ತು. ಅಲ್ಲಿ ದುಡಿದ ಕೂಲಿ ಹಣದಲ್ಲಿ 2 ಕುರಿಗಳನ್ನು ಖರೀದಿಸಿದ್ದ. ನಂತರ ಅದನ್ನೇ ಬಂಡವಾಳವನ್ನಾಗಿಸಿಕೊoಡು ಇದೀಗ 19 ಕುರಿಗಳ ಮಾಲಕನಾಗಿದ್ದಾನೆ. 100ಕ್ಕೂ ಅಧಿಕ ಕುರಿ ಸಾಕುವುದಕ್ಕಾಗಿ ಶೇಡ್ ನಿರ್ಮಿಸಿದ್ದು, ಈ ಶೆಡ್ ನಿರ್ಮಾಣಕ್ಕೂ ನರೆಗಾದಿಂದ 70 ಸಾವಿರ ರೂ ಸಿಕ್ಕಿದೆ. ಶೆಡ್ಡಿನಲ್ಲಿರುವ ಕುರಿಗಳಿಗೆ ಹಾವು-ಹುಳ-ಹುಪ್ಪಡಿಗಳ ಕಾಟವೂ ಅಷ್ಟಿಲ್ಲ. ಅನಾರೋಗ್ಯದ ಆತಂಕವೂ ಇಲ್ಲ.
ಕುರಿ ಗೊಬ್ಬರದಿಂದಲೇ 35-40 ಸಾವಿರ ರೂ ಆದಾಯ ಸಿಗುತ್ತದೆ. ಕೆಲ ಹಬ್ಬದ ವೇಳೆಯಲ್ಲಿ ಕುರಿ ಮಾರಾಟದಿಂದ ಸಿಗುವ ಲಾಭ ಬೇರೆ. `ಸ್ವಂತ ಊರಿನಲ್ಲಿ ಸ್ವ ಉದ್ಯೋಗಕ್ಕೆ ಸಾಕಷ್ಟು ಅವಕಾಶಗಳಿದ್ದು, ಎಲೆಕ್ಟಿಕಲ್ ವೃತ್ತಿ ಸಹ ದುಡಿಮೆಗೆ ನೆರವಾಗಿದೆ’ ಎಂಬುದು ನಂದನ್ ಮಾತು.




Discussion about this post