ಯಲ್ಲಾಪುರ: ಕುಂದಾಪುರ ಕಸಾಯಿಖಾನೆಗೆ ಸಾಗಿಸುತ್ತಿದ್ದ ಆರು ಜಾನುವಾರುಗಳನ್ನು ಯಲ್ಲಾಪುರ ಪೊಲೀಸರು ರಕ್ಷಿಸಿದ್ದಾರೆ.
ಬೆಳಗಾವಿಯಿಂದ ಅಕ್ರಮವಾಗಿ ಜಾನುವಾರುಗಳನ್ನು ತುಂಬಿಕೊoಡು ಹೊರಟ ಪಿಕ್‌ಅಪ್ ವಾಹನ ವಿವಿಧ ನಗರಗಳಲ್ಲಿ ಹಾದು ಹೋದರೂ ಯಾವ ಪೊಲೀಸರು ಇದನ್ನು ತಡೆಯುವ ಧೈರ್ಯ ಮಾಡಿರಲಿಲ್ಲ. ಈ ವಾಹನ ಕಿರವತ್ತಿ ತಲುಪಿ, ಅಲ್ಲಿಂದ ಮುಂದೆ ಸಾಗಿದ ಬಗ್ಗೆ ಮಾಹಿತಿ ಪಡೆದ ಯಲ್ಲಾಪುರ ಠಾಣೆ ಪಿಸೈ ಸಿದ್ದು ಗುಡಿ ತಮ್ಮ ಠಾಣೆಯ ಮಹಿಳಾ ಪಿಸೈ ನಸ್ರೀನ್‌ತಾಜ್ ಚಟ್ಟರಗಿ ಅವರ ಜೊತೆಗೂಡಿ ದಾಳಿ ನಡೆಸಿದರು. ಪಟ್ಟಣದ ಜೈ ಕರ್ನಾಟಕ ವೆಲ್ಡಿಂಗ್ ಗ್ಯಾರೇಜ್ ಮುಂದೆ ವಾಹನವನ್ನು ತಪಾಸಣೆಗೆ ಒಳಪಡಿಸಿದಾಗ ಐದು ಕೋಣದಮ ಮರಿಗಳು ಹಾಗೂ ಒಂದು ಹಸು ಕಾಣಿಸಿದೆ.
ಜಾನುವಾರುಗಳ ಉಸಿರಾಟಕ್ಕೆ ಸಹ ಸಮಸ್ಯೆ ಆಗುವಂತೆ ಇಕ್ಕಟ್ಟಾದ ಜಾಗದಲ್ಲಿ ಸಾಗಿಸುತ್ತಿದ್ದನ್ನು ಅರಿತ ಪೊಲೀಸರು ತಕ್ಷಣ ವಾಹನಸಹಿತ ಎಲ್ಲಾ ಜಾನುವಾರುಗಳನ್ನು ವಶಕ್ಕೆ ಪಡೆದ ಪೊಲೀಸರು ಅವುಗಳ ಜೀವ ಕಾಪಾಡಿದ್ದಾರೆ. ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತದ್ದ ಭಟ್ಕಳದ ತಿರುಮಲ ನಾಯಕ, ಬೆಳಗಾವಿಯ ರಮೇಶ ರಾಮಪ್ಪ ನೇಗನಾಳ, ಶಿವರಾಯಪ್ಪ ಪಾಟೀಲ ಹಾಗೂ ಗಂಗಪ್ಪ ನಿಂಗಪ್ಪ ಟೊನ್ನಿ ಎಂಬ ನಾಲ್ವರನ್ನು ಜೈಲಿಗಟ್ಟಿದ್ದಾರೆ.




Discussion about this post