ಕಾರವಾರ: `ಕೇಂದ್ರ ಬಿಜೆಪಿ ಸರ್ಕಾರ ಅಪಘಾನಿಸ್ಥಾನಕ್ಕೆ ನೆರವು ನೀಡಿದೆ. ಹೀಗಿರುವಾಗ ಕರ್ನಾಟಕ ಸರ್ಕಾರ ಕೇರಳಕ್ಕೆ ಸಹಾಯ ಮಾಡುವುದರಲ್ಲಿ ತಪ್ಪಿಲ್ಲ’ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಕೆ.ಶಂಭು ಶೆಟ್ಟಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
`ಕೆಲ ವರ್ಷಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ಭೂ ಕಂಪನ ಉಂಟಾಗಿತ್ತು. ಆ ದೇಶ ಆರ್ಥಿಕವಾಗಿ ಸಂಪೂರ್ಣವಾಗಿ ನೆಲಕಚ್ಚಿತ್ತು. ಆಗ, ಬಿಜೆಪಿ ಆಡಳಿತದ ಕೇಂದ್ರ ಸರಕಾರ 50000 ಮೆಟ್ರಿಕ್ ಟನ್ ಗೋದಿ, 250 ಮೆಟ್ರಿಕ್ ಟನ್‌ನಷ್ಟು ಔಷಧ ಹಾಗೂ ನೂರಾರು ಕೋಟಿ ರೂ ಹಣಕಾಸಿನ ನೆರವನ್ನು ಆ ದೇಶಕ್ಕೆ ನೀಡಿತ್ತು’ ಎಂದು ಸ್ಮರಿಸಿದರು. `ಆಗ ಜನ ಏರಿಕೆಯಿಂದ ತತ್ತರಿಸುತಿದ್ದರೂ, ಅದನ್ನು ಲೆಕ್ಕಿಸದೆ ಅಫ್ಘಾನಿಸ್ತಾನಕ್ಕೆ ಕೇಂದ್ರ ಸರ್ಕಾರ ನೀಡಿದ್ದ ಸಹಾಯವನ್ನು ಕೆಲವರು ಮುಕ್ತ ಕಂಠದಿoದ ಸ್ವಾಗತಿಸಿದ್ದರು. ಆದರೆ, ಅವರೇ ಇದೀಗ ಸಿದ್ದರಾಮಯ್ಯ ಅವರು ಕೇರಳಕ್ಕೆ ನೆರವು ನೀಡಿದ್ದನ್ನು ವಿರೋಧಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.
Discussion about this post