ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕಾಳಿ ಸಂಗಮ ಪ್ರದೇಶದಲ್ಲಿದ್ದ ಸೇತುವೆ ಕುಸಿದುಬಿದ್ದಿದೆ. ಮಂಗಳವಾರ ರಾತ್ರಿ 1 ಗಂಟೆಯ ಅವಧಿಯಲ್ಲಿ ಈ ಅವಘಡ ನಡೆದಿದ್ದು, ದುರಂತದಲ್ಲಿ ಲಾರಿ ನದಿ ಪಾಲಾಗಿದೆ. ಇನ್ನಷ್ಟು ವಾಹನಗಳು ಸಿಲುಕಿರುವ ಶಂಕೆಯಿದೆ. ಗಾಯಗೊಂಡ ಒಬ್ಬರನ್ನು ರಕ್ಷಿಸಲಾಗಿದೆ. ಇನ್ನು ಎಷ್ಟು ಜನ ನೀರಿನಲ್ಲಿ ಸಿಲುಕಿದ್ದಾರೆ ಎಂದು ಲೆಕ್ಕ ಸಿಕ್ಕಿಲ್ಲ.
ಇಲ್ಲಿನ ಹಳೆಯ ಸೇತುವೆ ಸಂಪೂರ್ಣ ಶಿಥಿಲಗೊಂಡಿರುವ ಬಗ್ಗೆ 10 ವರ್ಷಗಳ ಹಿಂದೆಯೇ ತಜ್ಞರು ವರದಿ ಸಲ್ಲಿಸಿದ್ದರು. ಹೀಗಾಗಿ ಇನ್ನೊಂದು ಸೇತುವೆಯನ್ನು ನಿರ್ಮಿಸಲಾಗಿತ್ತು. ಹೀಗಾಗಿ ಹೊಸದಾಗಿ ಸೇತುವೆ ನಿರ್ಮಿಸಲಾಗಿತ್ತು. ಆದರೆ, ಎರಡು ಸೇತುವೆಯಿಂದ ವಾಹನ ಓಡಾಟ ನಡೆಯುತ್ತಿದ್ದು, ಹಳೆ ಸೇತುವೆಯ ಪಿಲ್ಲರ್ ಕುಸಿತ ಕಂಡಿದೆ.
ಕುಸಿತ ಸೇತುವೆ 30 ವರ್ಷಗಳಷ್ಟು ಹಳೆಯದಾಗಿದೆ. ಕೆಲ ವರ್ಷಗಳ ಹಿಂದೆ ಚತುಷ್ಪತಯ ವಿಸ್ತರಣೆ ಭಾಗವಾಗಿ ಎರಡನೇ ಹೊಸ ಸೇತುವೆ ನಿರ್ಮಾಣ ಮಾಡಿದ್ದರಿಂದ ಹೆದ್ದಾರಿ ಸಂಚಾರಕ್ಕೆ ಸಮಸ್ಯೆಯಿಲ್ಲ. ಅದಾಗಿಯೂ ಕಾಳಿ ನದಿಯ ಇನ್ನೊಂದು ಸೇತುವೆ ಪರಿಶೀಲನೆ ನಡೆಸಿ, ಅದರ ದೃಢತೆ ಬಗ್ಗೆ ಮಾಹಿತಿ ನೀಡುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಜಿಲ್ಲಾಡಳಿತ ಸೂಚಿಸಿದೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಆಗಮಿಸಿ ಸ್ಥಳದಲ್ಲಿ ರಕ್ಷಣಾ ಚಟುವಟಿಕೆ ನಡೆಸುತ್ತಿದ್ದಾರೆ.
ಸೇತುವೆ ಕುಸಿತ ಹಾಗೂ ರಕ್ಷಣಾ ಚಟುವಟಿಕೆಯ ವಿಡಿಯೋ ಇಲ್ಲಿ ನೋಡಿ..




Discussion about this post