ಕಾಳಿ ಸಂಗಮ ಪ್ರದೇಶದ ಹಳೆಯ ಸೇತುವೆ ಕುಸಿದುಬಿದ್ದ ಸುದ್ದಿ ಕೇಳಿದ ತಕ್ಷಣ ತಡರಾತ್ರಿಯ ನಿದ್ರೆಬಿಟ್ಟು ಸ್ಥಳಕ್ಕೆ ಧಾವಿಸಿದ ಶಾಸಕ ಸತೀಶ್ ಸೈಲ್ ತುರ್ತು ಕಾರ್ಯಾಚರಣೆಯನ್ನು ವೀಕ್ಷಿಸಿದರು.
ಅಪಾಯಕ್ಕೆ ಸಿಲುಕಿದ್ದ ಲಾರಿ ಚಾಲಕನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. `ಈ ಸೇತುವೆ ಕುಸಿಯಲು ಹೊಸ ಸೇತುವೆ ನಿರ್ಮಾಣದ ವೇಳೆ ಮಾಡಿದ ಅವಾಂತರವೇ ಕಾರಣ’ ಎಂದು ಸತೀಶ್ ಸೈಲ್ ದೂರಿದರು.
`ಶರಾವತಿ, ಗಂಗಾವಳಿ, ಹಟ್ಟಿಕೇರಿ, ಮಾವಿನಹಳ್ಳ ಸೇರಿದಂತೆ ಎಲ್ಲಾ ಕಡೆ ಹಳೆಯ ಸೇತುವೆ ಮೇಲೆ ನಿಂತು ಹೊಸ ಸೇತುವೆ ನಿರ್ಮಿಸಲಾಗಿದೆ. ಹೊಸ ಸೇತುವೆಗೆ ವೈಬ್ರೆಶನ್ ಹಾಕುವಾಗ ಹಳೆಯ ಸೇತುವೆ ಅಲುಗಾಡಿದೆ. ಈ ಬಗ್ಗೆ 5 ವರ್ಷದ ಹಿಂದೆಯೇ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ಆರೋಪಿಸಿದರು.
`ಸದ್ಯ ಕುಸಿತವಾದ ಸೇತುವೆ ಮೇಲೆ ನಿಂತು ಸ್ಥಳೀಯರು ರಾತ್ರಿ ವೇಳೆ ಮೀನು ಹಿಡಿಯುತ್ತಾರೆ. ಅಂಥವರು ಈ ದುರಂತದಲ್ಲಿ ಸಿಲುಕದೇ ಇದ್ದರೆ ಅಷ್ಟೇ ಸಾಕು’ ಎಂದು ಪ್ರಾರ್ಥಿಸಿದರು.
ಸೇತುವೆ ದುರಂತದ ಬಗ್ಗೆ ಶಾಸಕ ಸತೀಶ್ ಸೈಲ್ ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..




Discussion about this post