ಅಗಸ್ಟ್ 13ರಂದು ಯಲ್ಲಾಪುರ ತಹಶೀಲ್ದಾರ್ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಆಗಮಿಸಲಿದ್ದು, ಸಾರ್ವಜನಿಕರ ಅಹವಾಲು ಆಲಿಸಲಿದ್ದಾರೆ.
ಅಂದು ಬೆಳಗ್ಗೆ 11 ಗಂಟೆಯಿoದ ಮಧ್ಯಾಹ್ನ 1 ಗಂಟೆಯವರೆಗೆ ಲೋಕಾಯುಕ್ತರು ಲಭ್ಯ. ದೂರುಗಳ ವಿಚಾರಣೆಯನ್ನು ಸಹ ಅಲ್ಲಿಯೇ ಮಾಡಲಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಸಾರ್ವಜನಿಕ ಕೆಲಸಗಳನ್ನು ನಿರ್ವಹಿಸಲು ಲಂಚಕ್ಕೆ ಬೇಡಿಕೆ ಮತ್ತು ಅರ್ಜಿಗಳ ವಿಲೇವಾರಿ ಮಾಡುವಲ್ಲಿ ಅನಗತ್ಯ ವಿಳಂಬ, ಸರ್ಕಾರಿ ಹಣ ದುರುಪಯೋಗ, ಕರ್ತವ್ಯ ಲೋಪ, ಕಳಪೆ ಕಾಮಗಾರಿ ಮೊದಲಾದ ವಿಷಯಗಳ ಕುರಿತು ದೂರು ನೀಡಬಹುದು.
ಮಾಹಿತಿಗೆ 08382- 295293, 220198, 222250, 222022, 229988ಗೆ ಸಂಪರ್ಕಿಸಿ.
Discussion about this post