ಜೋಯಿಡಾ: ಕಲ್ಲಿದ್ದಲು ಸಾಗಿಸುತ್ತಿದ್ದ ರೈಲು ದೂದ್‌ಸಾಗರ್ ಜಲಪಾತದ ಅನತಿ ದೂರದಲ್ಲಿ ಹಳಿ ತಪ್ಪಿದ್ದು, ಈ ಮಾರ್ಗದ ರೈಲು ಸಂಚಾರ ಸ್ಥಗಿತಗೊಂಡಿದೆ.
ಸೋನಾಲಿo ನಡುವಿನ ಸುರಂಗ ಸಂಖ್ಯೆ 15ರ ಬಳಿ ಈ ದುರಂತ ನಡೆದಿದೆ. ತೋರಣಗಲ್ ಹೊಸಪೇಟೆಯಲ್ಲಿ ವಾಸ್ಕೋದಿಂದ ಜಿಂದಾಲ್ ಕಂಪನಿಗೆ ಕಲ್ಲಿದ್ದಲು ಸಾಗಿಸುವ ಸರಕು ರೈಲು ಇದಾಗಿದ್ದು, ದಬ್ಬೆ ಎಂಬ ಪ್ರದೇಶದ ಬಳಿ ಅವಘಡ ನಡೆದಿದೆ.
ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ರೈಲು ಸಂಖ್ಯೆ 17309 ಯಶವಂತಪುರ ದಿಂದ ವಾಸ್ಕೋಡಿ ಹಾಗೂ 17310 ವಾಸ್ಕೋಡಿಯಿಂದ ಯಶವಂತಪುರಕ್ಕೆ ಹೋಗುವ ಎರಡು ರೈಲುಗಳ ಸಂಚಾರ ಸ್ಥಗಿತವವಾಗಿದೆ. ಜೊತೆಗೆ ಗೋವಾ ಎಕ್ಸ್ಪ್ರೆಸ್ ರೈಲು ಮಾರ್ಗ ಬದಲಾವಣೆ ಮಾಡಲಾಗಿದೆ.
ಹಳಿ ತಪ್ಪಿದ ಗೂಡ್ಸ್ ರೈಲನ್ನು ಮೇಲೆತ್ತುವ ಕಾರ್ಯ ನಡೆಯುತ್ತಿದೆ. ಜೊತೆಗೆ ಈ ಅವಘಡಕ್ಕೆ ಕಾರಣ ಏನು ಎಂಬ ಕುರಿತು ವಿಚಾರಣೆ ನಡೆದಿದೆ.





Discussion about this post