6
  • Latest

ಆವಾಸ್ ಯೋಜನೆ: ಮನೆ ಮುರಿದರೆ ಮೂರು ಕಾಸಿನ ಪರಿಹಾರ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಆವಾಸ್ ಯೋಜನೆ: ಮನೆ ಮುರಿದರೆ ಮೂರು ಕಾಸಿನ ಪರಿಹಾರ!

AchyutKumar by AchyutKumar
in ಸ್ಥಳೀಯ

ಕೂಡಿಗೆಯ ಸೀತಾ ಸಿದ್ದಿ ಅವರ ಮನೆ ಗೋಡೆ ಪೂರ್ತಿ ಕುಸಿದಿದ್ದು, ಇನ್ನೆರಡು ಗೋಡೆಗೆ ಭಾರೀ ಪ್ರಮಾಣದ ಬಿರುಕು ಮೂಡಿದೆ. ಆದರೆ, ಸರ್ಕಾರದಿಂದ ಅವರಿಗೆ ಪರಿಹಾರ 4 ಸಾವಿರ ರೂ ಪರಿಹಾರದ ಭರವಸೆ ಮಾತ್ರ ಸಿಕ್ಕಿದ್ದು, ಆ ಹಣ ಸಹ ಜಮಾ ಆಗಿಲ್ಲ!

`ಆವಾಸ್ ಯೋಜನೆ ಅಡಿ ನಿರ್ಮಿಸಿದ ಮನೆಗೆ ಪರಿಹಾರ ಕೊಡಲ್ಲ’ ಎಂಬುದು ಅಧಿಕಾರಿಗಳ ಅಂಬೋಣ. ಬೇರೆ ಯೋಜನೆಯಲ್ಲಾದರೂ ಒಂದು ಮನೆ ನಿರ್ಮಿಸಿಕೊಡಿ’ ಎಂಬುದು ಸೀತಾ ಅವರ ಪುತ್ರ ನರಸಿಂಹ ಸಿದ್ದಿ ಅವರ ಬೇಡಿಕೆ.

ಯಲ್ಲಾಪುರ ತಾಲೂಕಿನ ಇಡಗುಂದಿ ಗ್ರಾ ಪಂ ವ್ಯಾಪ್ತಿಯ ಕೂಡಿಗೆ ಸೀತಾ ಸಿದ್ದಿ ಅವರಿಗೆ 2010ರಲ್ಲಿ ಇಂದಿರಾಗಾoಧಿ ವಸತಿ ಯೋಜನೆ ಅಡಿ  ಮನೆ ಮಂಜೂರಿಯಾಗಿತ್ತು. ಮೂರು ಹಂತದಲ್ಲಿ 50 ಸಾವಿರ ರೂ ಅವರಿಗೆ ಜಮಾ ಆಗಿದ್ದು, 360 ಅಡಿ ಪ್ರದೇಶದಲ್ಲಿ ಶೀಟಿನ ಮನೆಯನ್ನು ನಿರ್ಮಿಸಿಕೊಂಡಿದ್ದರು.

ಇದೇ ಮನೆಯಲ್ಲಿ 2 ತಿಂಗಳ ಹಸುಗೂಸು ದೀಪಶಿಕ್, 2 ವರ್ಷದ ಮಗು ಪ್ರಣೀಕ ಹಾಗೂ 5 ವರ್ಷದ ಸಾತ್ವಿಕ್ ಎಂಬ ಮಕ್ಕಳು ವಾಸವಾಗಿದ್ದರು. ನರಸಿಂಹ ಸಿದ್ದಿ ಅವರ ಪತ್ನಿ ಕ್ರಿಸ್ಟಿನ್ ಜೊತೆ ಅವರ ತಮ್ಮ ವೇದಾಂತ ಸಹ ಅಲ್ಲಿಯೇ ಉಳಿದು ಶಾಲೆಗೆ ಹೋಗುತ್ತಿದ್ದರು. ಸೀತಾ ಸಿದ್ದಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಈ ಆರು ಜನರ ಪಾಲಿಗೆ ಹೊಸ ಮನೆ ನಿರ್ಮಾಣ ಕನಸಿನ ಮಾತು.

ಭಾನುವಾರ ಮನೆ ಕುಸಿತದ ಮಾಹಿತಿ ಪಡೆದ ಗ್ರಾಮ ಆಡಳಿತಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಪಾಯ ಅರಿತ ಅವರು ಕೂಡಲೇ ಮನೆ ಖಾಲಿ ಮಾಡುವಂತೆ ಸೂಚನೆ ನೀಡಿದ್ದು, ಮನೆ ಗೋಡೆ ಕುಸಿತದ ಆತಂಕದಲ್ಲಿದ್ದ ಆರೂ ಜನ ಗುರುವಾರವೇ ಯಲ್ಲಾಪುರಕ್ಕೆ ಬಂದು ಉದ್ಯಮನಗರದಲ್ಲಿ ಬಾಡಿಗೆ ಮನೆ ಹಿಡಿದಿದ್ದಾರೆ. ಆ ಮನೆ ಬಾಡಿಗೆ ಮೊತ್ತವೇ 3 ಸಾವಿರ ರೂ!

`ಕುಸಿತ ಕಂಡ ಮನೆಯ ಸರ್ಕಾರಿ ಮೌಲ್ಯವೇ 1.5 ಲಕ್ಷ ರೂಪಾಯಿ. ಶೇ 24ರಷ್ಟು ಹಾನಿಯಾದ ಬಗ್ಗೆ ವರದಿ ಸಲ್ಲಿಸಿದ್ದೇವೆ. ಮೊದಲಿನ ಆದೇಶದ ಪ್ರಕಾರ 4 ಸಾವಿರ ರೂ ದೊರೆಯುವುದು ಅನುಮಾನವಾಗಿತ್ತು. ಪ್ರಸ್ತುತ ಪರಿಷ್ಕೃತ ಆದೇಶ ಬಂದಿದ್ದು, ಅದರ ಪ್ರಕಾರ ಆ ಕುಟುಂಬದವರಿಗೆ 25 ಸಾವಿರ ರೂ ಸಿಗಬಹುದು. ಅವರ ಕಷ್ಟಕ್ಕೆ ಸ್ಪಂದಿಸಬೇಕು ಎಂಬ ಬಯಕೆಯಿದ್ದರೂ ನಿಯಮಾವಳಿಗಳ ಪ್ರಕಾರ ಹೆಚ್ಚಿನ ಪರಿಹಾರ ಒದಗಿಸುವುದು ಕಷ್ಟ’ ಎಂದು ಕಂದಾಯ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ShareSendTweetShare
Previous Post

ಹಳಿಬಿಟ್ಟು ಹಳ್ಳದ ಕಡೆ ವಾಲಿದ ರೈಲು

Next Post

ದೇವಿಮಾತಾಗೆ 108 ಬಗೆಯ ನೈವೇದ್ಯ

Next Post

ದೇವಿಮಾತಾಗೆ 108 ಬಗೆಯ ನೈವೇದ್ಯ

ಮನೆಗೆ ಬರುವ ಗೃಹಲಕ್ಷ್ಮೀ: ಹಾಸಿಗೆ ಹಿಡಿದವರಿಗೂ ಗ್ಯಾರಂಟಿ ಹಣ!

ಪಿಡಿಓಗೆ ಒಲಿದ ಪ್ರಶಸ್ತಿ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.