ಕಾಂತಾರಾ ಚಿತ್ರದ ಯಶಸ್ಸಿನ ನಂತರ ಇಡೀ ವಿಶ್ವವೇ ಕರಾವಳಿಯ ಕಡೆ ನೋಡುತ್ತಿದೆ. ಇಲ್ಲಿನ ಸಂಸ್ಕೃತಿ, ದೈವ, ಆಚರಣೆ, ಕಂಬಳದ ಬಗ್ಗೆ ಜನರಲ್ಲಿ ಪ್ರೀತಿ ಮೂಡುತ್ತಿದೆ. ಅಷ್ಟೇ ಅಲ್ಲ, ಕರಾವಳಿಯ ಜನರು ಎಲ್ಲಿ ತೆರಳಿದರೂ ವಿಶೇಷ ಗೌರವ ನೀಡಲಾಗುತ್ತಿದೆ. ಜನರ ಜೊತೆ ಇದೀಗ ಜಾನುವಾರುಗಳಿಗೂ ಮನ್ನಣೆ ದೊರೆತಿದೆ. ಪ್ರಸಿದ್ಧ ಆಭರಣ ಕಂಪನಿಯಾದ `ಆಭರಣ’ ತನ್ನ ಜಾಹೀರಾತಿನಲ್ಲಿ ಕರಾವಳಿಯ ಕೋಣನನ್ನು ಅಳವಡಿಸಿಕೊಂಡಿದೆ!
ಕoಬಳ ಕರಾವಳಿಯ ಸಾಂಪ್ರದಾಯಿಕ ಹಾಗೂ ಸಾಹಸದ ಕ್ರೀಡೆ. ಇಲ್ಲಿನ ಕೋಣಗಳ ಓಟ ನೋಡುವುದೇ ಸೊಗಸು. ಕಂಬಳ ಓಟಗಾರರ ಸಾಹಸ ಯಾವ ದಾಖಲೆಗಳಿಗೂ ಕಡಿಮೆಯಿಲ್ಲ. ಕಂಬಳಕ್ಕೆ ಬರುವ ಕೋಣಗಳ ಆರೈಕೆ, ಅವುಗಳ ಆಗು-ಹೋಗುಗಳ ಬಗ್ಗೆಯೂ ಅದರ ಮಾಲಕರು ಅಪಾರ ಕಾಳಜಿ ವಹಿಸುತ್ತಾರೆ. ಈ ನಿಟ್ಟಿನಲ್ಲಿ ಕಂಬಳದ ಕೋಣನ ಜೊತೆ ಅದರ ಮಾಲಕನಿಗೆ ಆಭರಣ ತೊಡಿಸಿದ `ಆಭರಣ’ ಕಂಪನಿ ತನ್ನ ಸಂಸ್ಥೆಗೆ ಕೋಣ ಹಾಗೂ ಅದರ ಮಾಲಕನನ್ನೇ ರಾಯಬಾರಿಯನ್ನಾಗಿ ಮಾಡಿದೆ. ಹೀಗಾಗಿ ಇದು ಕೇವಲ ಜಾಹೀರಾತಲ್ಲ. ಕರಾವಳಿಗರ ಹೆಮ್ಮೆ!
* ಉಮಾಶಂಕರ್ ಬೆಲ್ಲಾಳ್, ಬೆಳ್ತಂಗಡಿ





Discussion about this post