6
September 29, 2026

Mental illness | ಮಾರುತಿ ಮಂದಿರದ ಬಳಿ ಸಾವನಪ್ಪಿದ ಮಾನಸಿಕ ಅಸ್ವಸ್ಥೆ

ದಾಂಡೇಲಿ: ಕೆಲ ದಿನಗಳಿಂದ ಜೆ.ಎನ್. ರಸ್ತೆಯಲ್ಲಿರುವ ಮಾರುತಿ ಮಂದಿರದ ಅಕ್ಕ-ಪಕ್ಕ ವಾಸಿಸುತ್ತಿದ್ದ (Mental illness) ಗಂಗಮ್ಮ ರಾಯಬಾಗ್ಕರ್ ಎಂಬಾತರು ಮಂಗಳವಾರ ಮಾರುತಿ ದೇವಾಲಯದ ಬಳಿ ಸಾವನಪ್ಪಿದ್ದಾರೆ.

ಮಾನಸಿಕವಾಗಿ ಕುಗ್ಗಿದ್ದ ವೃದ್ಧ ಮಹಿಳೆ ರಸ್ತೆ ಬದಿಯಲ್ಲಿ ವಾಸ ಮಾಡುತ್ತಿದ್ದರು. ಪ್ರಸ್ತುತ ಅನಾರೋಗ್ಯದ ಹಿನ್ನಲೆ ಸಾವನಪ್ಪಿರುವ ಶಂಕೆಯಿದೆ. ಪೌರ ಕಾರ್ಮಿಕರು ಆಗಮಿಸಿ ಶವ ಎತ್ತಿದರು. ಮುಕ್ತಿ ವಾಹನದ ಮೂಲಕ ದೇಹವನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *

You cannot copy content of this page