6
September 29, 2026

Post office | ಅಂಚೆ ನೌಕರರಿಂದ ರಾಷ್ಟ್ರಪ್ರೇಮ ಜಾಗೃತಿ ಕಾರ್ಯ

ಕುಮಟಾ: ತಿರಂಗ ಯಾತ್ರೆ, ತಿರಂಗ ಓಟ, ತಿರಂಗ ಮೇಳ ನಡೆಸುವಂತೆ ಅಂಚೆ ಇಲಾಖೆಗೆ (Post office) ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಅದರ ಅನ್ವಯ ವಿವಿಧ ಕಚೇರಿಗಳಿಗೆ ತೆರಳಿ ಅಂಚೆ ನೌಕರರು ರಾಷ್ಟ್ರಧ್ವಜ ಮಹತ್ವದ ಕುರಿತು ಅರಿವು ಮೂಡಿಸುತ್ತಿದ್ದಾರೆ.

ಕುಮಟಾ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ದಿನಕರ ಕೆ ಶೆಟ್ಟಿ ಅವರಿಗೆ ಅಂಚೆ ಸಿಬ್ಬಂದಿ ರಾಷ್ಟ್ರಧ್ವಜ ಹಸ್ತಾಂತರಿಸಿದರು. ಕಾರವಾರ ಅಂಚೆ ವಿಭಾಗದ ಅಂಚೆ ಅಧೀಕ್ಷಕ ಧನಂಜಯ ಆಚಾರ್ ಕೇಂದ್ರ ಸರ್ಕಾರದ ಸೂಚನೆಗಳ ಬಗ್ಗೆ ಮಾಹಿತಿ ನೀಡಿದರು. ಕುಮಟಾ ಪ್ರಧಾನ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಸುರೇಶ್ ಕೆ, ಕಿರಣ್ ಪೈ ಹಾಗೂ ಅಂಚೆ ಸಿಬ್ಬಂದಿ ಶಿವಾನಂದ ಸಿರ್ಸಿಕರ ಎಂ ಆಯ್ ನಾಯ್ಕ, ವಿಶಾಲ್ ನಾಯ್ಕ, ಅತುಲ್ ಆಚಾರಿ, ದಿವ್ಯಾ ಮುಕ್ರಿ ಇದ್ದರು.

Leave a Reply

Your email address will not be published. Required fields are marked *

You cannot copy content of this page