ಅಂಕೋಲಾದ ಪ್ರತಿಭೆಗಳು ಸೇರಿ ನಟಿಸಿರುವ ಕುತೂಹಲಕಾರಿ, ಪತ್ತೆದಾರಿ, ಪ್ರೇಮಕಥೆಯನ್ನು ಒಳಗೊಂಡ ಕಿರುಚಿತ್ರ (Cinema) `ಪ್ರತೀಕಾರ’ ಯೂಟೂಬಿನಲ್ಲಿ ಬಿಡುಗಡೆಯಾಗಿದೆ.
ಸುಗ್ಗಿ ಕುಣಿತ, ಮರ ಕಾಲು ಕುಣಿತ, ಗುಮಟೆವಾದನ, ಜಾನಪದ ಹಾಡು, ನಾಟಕ, ಯಕ್ಷಗಾನ ಮುಂತಾದ ಕಲೆಗಳಿಗೆ ಹಾಗೂ ನಾಟಿ ಔಷಧಕ್ಕೆ ಹೆಸರುವಾಸಿಯಾದ ಅಂಕೋಲಾ ತಾಲೂಕಿನ ಬೆಳಂಬಾರದ ಯುವಕರ ತಂಡ ಈ ಚಿತ್ರ ನಿರ್ಮಿಸಿದೆ. `ಶ್ರೀ ಮಹಾಸತಿ ಫಿಲಂಸ್’ ಅಡಿ ನಿರ್ಮಿಸಿದ ಈ ಚಿತ್ರಕ್ಕೆ ನಿಸರ್ಗದ ಮಡಿಲಲ್ಲಿ 6 ತಿಂಗಳ ಕಾಲ ಚಿತ್ರಿಕರಣ ನಡೆಸಲಾಗಿದೆ.
ಬೆಳಂಬಾರದ ಯುವ ಹವ್ಯಾಸಿ ಕಲಾವಿದರಾದ ಕವಿರಾಜ್ ಗೌಡ ಕಲೆಯಲ್ಲಿ ಆಸಕ್ತಿ ಹೊಂದಿದ್ದು, ಕೆಲವು ನಾಟಕ ಕಲಾವಿದರ, ಲೇಖಕರ ಪ್ರೋತ್ಸಾಹದಿಂದ ಅನೇಕ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಸ್ವತಃ ತಾವೇ ಕಥೆ- ಚಿತ್ರಕಥೆ ಬರೆದು ನಿರ್ದೇಶನ ಹಾಗೂ ಸಂಕಲನ ಮಾಡಿದ್ದಾರೆ.
ಈ ಕಿರುಚಿತ್ರದಲ್ಲಿ ಎರಡು ಆಯಾಮಗಳಿದ್ದು, ಮೊದಲನೇ ಆಯಾಮದಲ್ಲಿ ಸರಣಿ ಕೊಲೆ ಮತ್ತು ಕೊಲೆಗಾರನ ಪತ್ತೆ ಹಚ್ಚುವ ಕಾರ್ಯ ಪೊಲೀಸ್ ಅಧಿಕಾರಿಂದ ನಡೆಯುತ್ತದೆ. ಆದರೆ ಮುಖವಾಡ ಧರಿಸಿ ಕೊಲೆಗೈಯ್ಯುವ ಆ ಸರಣಿ ಕೊಲೆಗಾರ ಯಾರು? ಕೊಲೆಗೆ ಕಾರಣವೇನು? ಎನ್ನುವುದು ಮಾತ್ರ ನಿಗೂಢವಾಗಿರುತ್ತದೆ. ಈ ಮಧ್ಯೆ ಸೈಕೋ ಕಿಲ್ಲರ್ ಓರ್ವ ಜೈಲಿನಿಂದ ಪರಾರಿಯಾಗಿರುತ್ತಾನೆ. ಆತನೇ ಈ ಎಲ್ಲಾ ಕೊಲೆಗೆ ಕಾರಣನೇ ಎನ್ನುವ ಸಂಶಯ ಪೊಲೀಸ್ ಅಧಿಕಾರಿಗೆ ಎದುರಾಗುತ್ತದೆ. ಆದರೆ ಎರಡನೇ ಆಯಾಮದಲ್ಲಿ ಆ ಸರಣಿ ಕೊಲೆ ಹಂತಕ ಯಾರು? ಕೊಲೆಗೆ ಕಾರಣ ಏನು? ಎನ್ನುವ ಸತ್ಯಾಂಶ ತಿಳಿಯುತ್ತದೆ.
ಹವ್ಯಾಸಿ ಕಲಾವಿದರಾದ ಕವಿರಾಜ ಗೌಡ, ರವೀಂದ್ರ ಗೌಡ, ಪ್ರಜ್ವಲ್, ರಾಜೇಶ್ವರಿ, ನಿಖಿತ, ಶಿವಾನಿ, ರವೀಶ್, ಗೋವಿಂದ, ಮಾಬ್ಲು, ಅಶ್ವಥ್, ಸಂದೀಪ ಪ್ರಮುಖ ತಾರಾಗಣದಲ್ಲಿದ್ದಾರೆ’ ಎಂದು ಪ್ರವೀಣಕುಮಾರ್ ಬೆಳಂಬಾರ ವಿವರಿಸಿದರು.
ಈ ಕಿರುಚಿತ್ರವನ್ನು ಇಲ್ಲಿ ನೋಡಿ..
Discussion about this post