ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬoಧಿಸಿದoತೆ ಬಂಧಿತರಾಗಿರುವ ನಟ ದರ್ಶನ್ ತೂಗುದೀಪ ಹಾಗೂ ಇನ್ನಿತರ ಆರೋಪಿಗಳು ಬುಧವಾರ ಕೊಲೆ ನಡೆದ ಶೆಡ್’ಗೆ ಆಗಮಿಸಿದ್ದು, ಅಂದಿನ ಘಟನಾವಳಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪವಿತ್ರಾಗೌಡ ಸೇರಿದಂತೆ ಎಲ್ಲಾ 13 ಆರೋಪಿಗಳನ್ನು ಪಟ್ಟನಗೆರೆಯ ಶೆಡ್’ಗೆ ಕರೆದೊಯ್ದಿರುವ ಪೊಲೀಸರು ಅವರಿಂದ ಸತ್ಯ ಬಾಯ್ಬಿಡಿಸುವ ಪ್ರಯತ್ನ ನಡೆಸಿದರು. ಚಿತ್ರದುರ್ಗದಿಂದ ಅಪಹರಿಸಿಕೊಂಡು ಬಂದಿದ್ದ ರೇಣುಕಾಸ್ವಾಮಿಯನ್ನು ಇದೇ ಶೆಡ್’ಗೆ ಕರೆದೊಯ್ದು ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ್ದು, ಬಳಿಕ ಶವವನ್ನು ಸುಮನಹಳ್ಳಿಯ ಬಳಿ ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಪಟ್ಟಣಗೆರೆ ಶೆಡ್ ಸ್ಥಳ ಮಹಜರಿಗೂ ಮುನ್ನ ಆರೋಪಿಗಳನ್ನು ಶವ ಎಸೆದ ಜಾಗದಲ್ಲಿ ಸ್ಥಳ ಮಹಜರು ನಡೆಯಿತು.
Discussion about this post