ಶಿವಮೊಗ್ಗ: ತಮ್ಮ ಮೇಲಿನ ಲೈಂಗಿಕ ಹಗರಣ ಪ್ರಕರಣಕ್ಕೆ ಸಂಬoಧಿಸಿ ಹೈಕೋರ್ಟ ಮೊರೆ ಹೋಗಿರುವ ಮಾಜಿ ಸೀಎಂ ಬಿ ಎಸ್ ಯಡಿಯೂರಪ್ಪ ಪ್ರಕರಣದ ರದ್ಧತಿಗೆ ಮನವಿ ಮಾಡಿದ್ದಾರೆ.
`ಸಹಾಯ ಕೋರಿ ನಿವಾಸಕ್ಕೆ ಹೋಗಿದ್ದ ವೇಳೆ ತಮ್ಮ ಪುತ್ರಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದರು’ ಎಂದು ಮಹಿಳೆಯೊಬ್ಬರು ಕಳೆದ ಲೋಕಸಭೆ ಚುನಾವಣೆಗೆ ಮೊದಲು ಬಿಎಸ್ ಯಡಿಯೂರಪ್ಪನವರ ವಿರುದ್ಧ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಿಸಿದ್ದರು.
`ನಾನು ಯಾವುದೇ ಕಾನೂನುಬಾಹಿರ ಕೃತ್ಯ ಎಸಗಿಲ್ಲ. ಫಿರ್ಯಾದಿ ಮಹಿಳೆಗೆ ದೂರು ನೀಡುವುದೇ ಹವ್ಯಾಸವಾಗಿದೆ. ನಾನು ಪೊಲೀಸ್ ವಿಚಾರಣೆಗೆ ಹಾಜರಾಗಿದ್ದು, ದೂರುದಾರರು ಬಂದಿಲ್ಲ. ಈ ದೂರಿನಲ್ಲಿ ಸತ್ಯಾಂಶಗಳಲ್ಲಿದಿರುವುದರಿAದ ರದ್ದುಪಡಿಸಬೇಕು’ ಎಂದು ಅವರು ಹೈಕೋರ್ಟಿಗೆ ಮನವಿ ಮಾಡಿದ್ದಾರೆ.
ಕೆಲವು ವರ್ಷಗಳಿಂದ ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿದ್ದ ದೂರು ನೀಡಿದ್ದ ಮಹಿಳೆ, ಬನ್ನೇರುಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಮೇ 27ರಂದು ಮೃತಪಟ್ಟಿದ್ದಾರೆ.
Discussion about this post